
ಬಂಟ್ವಾಳ: ಫೆ.12ರಿಂದ 14ರವರೆಗೆ ಬಿ.ಸಿ.ರೋಡಿನ ಚಂಡಿಕಾನಗರದಲ್ಲಿರುವ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವಾದಿಗಳು ನಡೆಯಲಿವೆ.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್;ಲೊಇ 12ರಂದು ಬೆಳಗ್ಗೆ ಪ್ರಾರ್ಥನೆ, ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತುಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ, 13ರಂದು ಬೆಳಗ್ಗೆ ಗಣಹೋಮ, 10ಕ್ಕೆ ಅನ್ನಛತ್ರ ಶುಭಾರಂಘ ಕಾರ್ಯಕ್ರಮ, ಬಳಿಕ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಬಲಿ, ವಸಂತ ಕಟ್ಟೆ ಪೂಜೆ, ವಿಶೇಷ ನರ್ತನ ಬಲಿ, 14ರಂದು ಬೆಳಗ್ಗೆ ದರ್ಶನ ಬಲಿ, ಉತ್ಸವಾರಂಭ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಹರಕೆ ಬಂದ ಸೀರೆಗಳ ಏಲಂ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ವಿಶೇಷ ರಂಗಪೂಜೆ ನಡೆಯಲಿದೆ, ಸಂಜೆ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ತೆಲಿಕೆದ ಗೊಂಚಿಲ್ ನಡೆಯಲಿದೆ.


Be the first to comment on "B.C.Road: ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ಜಾತ್ರೆ"