ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ( ರಿ) ಬಂಟ್ವಾಳ ತಾಲೂಕು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬಂಟ್ವಾಳ, ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ ಬಂಟ್ವಾಳ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ಭಜನೋತ್ಸವ- 2026 ನಡೆಯಿತು.

ಸಂಜೆ ಬಂಟ್ವಾಳ ದೇವರಕಟ್ಟೆಯಿಂದ ಶ್ರೀ ತಿರುಮಲ ವೆಂಕಟರಮಣ ದೇವರ ಸನ್ನಿಧಿವರೆಗೆ ಕುಣಿತ ಭಜನಾ ತಂಡಗಳ ಮೆರವಣಿಗೆಗೆ ಶಾಸಕ ರಾಜೇಶ್ ನಾಯ್ಕ್ ಮತ್ತು ಉದ್ಯಮಿ ಐತಪ್ಪ ಆಳ್ವ ಸುಜೀರ್ ಗುತ್ತು ಚಾಲನೆ ನೀಡಿದರು. ದೇವಸ್ಥಾನದಲ್ಲಿ ಗಣ್ಯರು ಜ್ಯೋತಿಪ್ರಜ್ವಲಿಸಿದ ಬಳಿಕ ಭಜನೆ ಆರಂಭಗೊಂಡಿತು. ತತ್ವಮಸಿ ಭಜನಾ ತಂಡ ಪೊಳಲಿ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮವನ್ನು ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದ ಅಧ್ಯಕ್ಷ ಉದ್ಯಮಿ ರಘುನಾಥ ಸೋಮಯಾಜಿ ಉದ್ಘಾಟಿಸಿ ಮಾತನಾಡಿ, ಇದು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹೆಚ್ಚಿಸುವುದಲ್ಲದೆ, ನಮ್ಮ ಸಂಸ್ಕೃತಿಯನ್ನು ಪೋಷಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ, ರೋಟರಿ ಮಾಜಿ ಗವರ್ನರ್ ಎನ್. ಪ್ರಕಾಶ್ ಕಾರಂತ ವಹಿಸಿ, ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ ಭಜನೆ ಉತ್ತಮ ಮಾರ್ಗ ಎಂದು ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಮಾತನಾಡಿ, ಭಜನೋತ್ಸವ ಮೂಲಕ ಭಾರತಕ್ಕೆ ಸಾಂಸ್ಕೃತಿಕವಾಗಿ ಉತ್ತಮ ಮೌಲ್ಯಗಳನ್ನು ನವಪೀಳಿಗೆ ಮೂಲಕ ನೀಡಲಾಗುತ್ತಿರುವುದು ವಿಶೇಷ. ಎಲ್ಲ ಕಡೆಯೂ ಭಜನೋತ್ಸವ ಪಸರಿಸಲಿ. ಭಜನೆಗೆ ತಯಾರು ಮಾಡುವ ಮಕ್ಕಳ ಪೋಷಕರ ಪಾತ್ರ ಮಹತ್ವದ್ದು ಭಜನೆ ಮಾಡುವವರು ಸಮಾಜಘಾತುಕರಾಗುವುದಿಲ್ಲ ಎಂದು ಹೇಳಿದರು.

ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಶೆಣೈ ಮಾತನಾಡಿ, ವೆಂಕಟರಮಣ ದೇವರಿಗೆ ಮಲ್ಲಿಗೆ, ಯಕ್ಷಗಾನ ಮತ್ತು ಭಜನೆ. ಇದು ದೇವರ ಕೃಪೆಯಿಂದ ಸಾಧ್ಯವಾಗಿದೆ ಎಂದರು. ಇದೇ ಸಂದರ್ಭ, ಭಜನೆ ತಂಡದ ಗುರುಗಳಾದ ಸಂದೇಶ್ ಮದ್ದಡ್ಕ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ, ಸೇವಾಂಜಲಿ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ದೇವಸ್ಥಾನದ ಮೊಕ್ತೇಸರ ಭಾಮಿ ನಾಗೇಂದ್ರನಾಥ ಶೆಣೈ, , ಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲಿಯಾನ್, ತಾಲೂಕು ಅಧ್ಯಕ್ಷ ಮುರಳೀಧರ, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಪಾಣೆಮಂಗಳೂರು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಪ್ರಕಾಶ್ ಬಾಳಿಗಾ, ಬಸ್ತಿ ಮಾಧವ ಶೆಣೈಪ್ರಮುಖರಾದ ಸಂಜೀವ ಪೂಜಾರಿ ಗುರುಕೃಪಾ, ಭುವನೇಶ್ ಪಚ್ಚಿನಡ್ಕ, ಅರುಂಧತಿ ಸೋಮಯಾಜಿ, ಡಾ. ಶಶಿಕಲಾ ಸೋಮಯಾಜಿ, ಸುದರ್ಶನ ಜೈನ್, ಮಾಣಿಕ್ಯರಾಜ ಜೈನ್, ಧರಣೇಂದ್ರ, ರಾಮದಾಸ ಬಂಟ್ವಾಳ, ಸುಮುಖಕೃಷ್ಣ, ಸದಾನಂದ ನಾವರ, ಕೃಷ್ಣ ಅಲ್ಲಿಪಾದೆ, ಪ್ರಕಾಶ್, ಪ್ರವೀಣ್ ಪಾದೆಬೆಟ್ಟು, ಕರುಣೇಂದ್ರ ಪೂಜಾರಿ, ಯೋಜನೆ ನಿರ್ದೇಶಕ ದಿನೇಶ್ ಉಪಸ್ಥಿತರಿದ್ದರು. ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಸ್ವಾಗತಿಸಿದರು. ರಾಮಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.


Be the first to comment on "600ಕ್ಕೂ ಅಧಿಕ ಭಜಕರಿಂದ ಕುಣಿತ ಭಜನೆ: ಬಂಟ್ವಾಳದಲ್ಲಿ ಭಜನೋತ್ಸವ 2026 – News with Photos and Video"