ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ, ಬಿಲ್ಲವ ಮಹಿಳಾ ಸಮಿತಿ ಹಾಗೂ ಯುವವಾಹಿನಿ ಬಂಟ್ವಾಳ ಘಟಕದ ಸಹಕಾರದೊಂದಿಗೆ, ಬಂಟ್ವಾಳ ಭಂಡಾರಿಬೆಟ್ಟು ಎಸ್.ವಿ.ಎಸ್. ಶಾಲಾ ಮೈದಾನದಲ್ಲಿ 2026ರ ಜನವರಿ 25ರಂದು ನಡೆಯಲಿರುವ ಕೋಟಿ ಚೆನ್ನಯ ಕ್ರೀಡೋತ್ಸವ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅವರು ಬಿಡುಗಡೆಗೊಳಿಸಿದರು.

ಕೋಟಿ ಚೆನ್ನಯ ಕ್ರೀಡೋತ್ಸವದಲ್ಲಿ ಪುರುಷರ ವಿಭಾಗದಲ್ಲಿ ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್, ಮಹಿಳೆಯರ ವಿಭಾಗದಲ್ಲಿ ತ್ರೋಬಾಲ್, ಹಗ್ಗಜಗ್ಗಾಟ (ಗುಂಪು ಸ್ಪರ್ಧೆ), ಹಾಗೂ ವಿವಿಧ ವಿಭಾಗಗಳಲ್ಲಿ 50 ಮೀ, 100 ಮೀ, 200 ಮೀ ಓಟ, ರಿಲೇ, ಗುಂಡೆಸೆತ, ಉದ್ದಜಿಗಿತ, ನಡಿಗೆ ಮತ್ತು ಲಕ್ಕಿ ಗೇಮ್ ಸ್ಪರ್ಧೆಗಳು ನಡೆಯಲಿವೆ. ಬೆಳಿಗ್ಗೆ ಗಂಟೆ 9.30ರಿಂದ ಸಂಜೆ 6.00ರವರೆಗೆ, ಬಂಟ್ವಾಳ ತಾಲೂಕಿನ ವಿವಿಧ ಬಿಲ್ಲವ ಸಂಘಗಳ ನಡುವೆ ತೀವ್ರ ಪೈಪೋಟಿಯ ಕ್ರೀಡಾಸ್ಪರ್ಧೆಗಳು ನಡೆಯಲಿವೆ. ಈ ಸಂದರ್ಭ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನಾ ಸಮಿತಿಯ ಅಧ್ಯಕ್ಷರಾದ ಕೆ ಹರಿಕೃಷ್ಣ ಬಂಟ್ವಾಳ್, ಗೆಜ್ಜೆಗಿರಿ ನಂದನಬಿತ್ತ್‌ಲ್ ಕ್ಷೇತ್ರದ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಸದಾನಂದ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ರಾಮಪ್ಪ ಪೂಜಾರಿ, ಸಂಜೀವ ಪೂಜಾರಿ (ಗುರುಕೃಪಾ), ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್., ಕೋಶಾಧಿಕಾರಿ ಸುನೀಲ್ ಕುಂದರ್, ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್, ಆಂತರಿಕ ಲೆಕ್ಕ ಪರಿಶೋಧಕ ಪ್ರಶಾಂತ್ ಕೋಟ್ಯಾನ್, ಕೋಟಿ ಚೆನ್ನಯ ಕ್ರೀಡಾಕೂಟದ ಸಂಚಾಲಕರಾದ ಬೇಬಿ ಕುಂದರ್, ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ, ಕೋಶಾಧಿಕಾರಿ ಸುಂದರ ಪೂಜಾರಿ ಬೊಳಂಗಡಿ, ಜತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್ (ಕುದನೆ) ಉಪಸ್ಥಿತರಿದ್ದರು



Be the first to comment on "ಕೋಟಿ ಚೆನ್ನಯ ಕ್ರೀಡೋತ್ಸವ : ಆಮಂತ್ರಣ ಬಿಡುಗಡೆ"