

ಬಂಟ್ವಾಳ: 50 ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡ ಅಮ್ಮುಂಜೆ ಗ್ರಾಮದ ಬಾರಿಂಜೆ- ಕಾಣಿಯೂರು ರಸ್ತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉದ್ಘಾಟಿಸಿದರು,
ಸ್ಥಳದಾನಿಗಳಾದ ವಿನಯ್ ನಾಯ್ಕ್ ಅಮ್ಮುಂಜೆ ಅವರನ್ನು ಇದೇ ವೇಳೆ ಶಾಸಕರು ಸನ್ಮಾನಿಸಿದರು.ಈ ಸಂದರ್ಭ ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ, ಉಪಾಧ್ಯಕ್ಸರಾದ ರಾಧಾಕೃಷ್ಣ ತಂತ್ರಿ, ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಸುವರ್ಣ, ಕಾರ್ತಿಕ್ ಬಲ್ಲಾಳ್, ಪ್ರಮೀಳಾ, ಭಗೀರಥಿ, ಬಿಜೆಪಿ ಪ್ರಮುಖರಾದ ಹರಿಶ್ಚಂದ್ರ ಹೊಳೆಬದಿ, ಪ್ರವೀಣ್ ದಾಸಿಮಾರ್, ಪ್ರವೀಣ್ ಚೌಟ, ಪ್ರೇಮ ಚೌಟ, ಗೋಪಾಲ್ ಅಂಚನ್ ಬಡಕಬೈಲ್, ಸುಧೀರ್ ಕಾಣಿಯೂರ್, ಜಯಂತ್ ಅಮ್ಮುಂಜೆ, ಪ್ರಸಾದ್ ಕಾಣಿಯೂರ್, ಪ್ರಕಾಶ್ ದಾಸಿಮಾರ್, ಗ್ರಾಮದ ಹಿರಿಯರಾದ ಶೇಖರ್ ಪೂಜಾರಿ ಕಾಣಿಯೂರ್, ಪುರುಷೋತ್ತಮ್ ಪೂಜಾರಿ, ನಾಗೇಶ್ ಪೂಜಾರಿ, ಉಮೇಶ್ ಪೂಜಾರಿ ಬಾರಿಂಜೆ, ಸತ್ಯಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಬಿ. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು


Be the first to comment on "50 ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡ ಬಾರಿಂಜೆ-ಕಾಣಿಯೂರು ರಸ್ತೆ ಉದ್ಘಾಟನೆ"