ಬೊಳ್ಳಾರಿ ಆಶೀರ್ವಾದ್ ಸೇವಾ ಸಂಘ ಅಶ್ರಯದಲ್ಲಿ ಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್ -3 ಕ್ರಿಕೆಟ್ ಪಂದ್ಯಾಟ ನಡೆಯಿತು.

ಕಾರ್ಯಕ್ರಮವನ್ನು ಪತ್ರಕರ್ತ ಸಂತೋಷ್ ನೆತ್ತರಕೆರೆ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಚಿಂತನೆಯೊಂದಿಗೆ ಸಂಘಟನೆಯ ಮೂಲಕ ಸಮಾಜಮುಖಿ ಸೇವೆಯನ್ನು ಮಾಡುತ್ತಿರುವ ಆಶೀರ್ವಾದ ಸೇವಾ ಸಂಘ ನಿರಂತರ 38 ವರುಷಗಳಿಂದ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ, ಕ್ರಿಕೆಟ್ ಮೂಲಕ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿ ಎಂದರು.
ತಾ ಪಂ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ಶ್ರೀ ಶಾರದಾ ಪೂಜಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರಾಘವ ಬಂಗೇರ ಪೆರ್ಲಬೈಲು, ಸಾಮಾಜಿಕ ಕಾರ್ಯಕರ್ತ ಜಗದೀಶ ಪೂಜಾರಿ ಕುಮ್ಡೇಲ್, ಪ್ರಮುಖರಾದ ದಿವಾಕರ ಪೆರ್ಲಬೈಲು,ನಾರಾಯಣ್ ಕಿರೋಡಿಯನ್,ಸುಧಾಕರ ಕೊಟ್ಟಿಂಜ,ಗೋಪಾಲ್ ಬೊಳ್ಳಾರಿ, ಪ್ರದೀಪ್ ಕುಮಾರ್ ಮೂದಲ್ಮೆ, ಅಶೋಕ್ ಕೊಂಡಣ, ಪ್ರಿಯಾ ಸತೀಶ್,ಜಾಲಜಾಕ್ಷಿ ಕೋಟ್ಯಾನ್, ದೀಪಕ್ ಬೊಳ್ಳಾರಿ, ದಯಾನಂದ ಬೊಳ್ಳಾರಿ,ಭವಾನಿ ಶಂಕರ್ ಉಪಸ್ಥಿತರಿದ್ದರು. ಸಂದೀಪ್ ಕುಲಾಲ್ ವಂದಿಸಿದರು. ಸುಶಾನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿನೋದ್ ಬೊಳ್ಳಾರಿ ಸಹಕರಿಸಿದರು.


Be the first to comment on "Cricket Match: ಬೊಳ್ಳಾರಿ ಆಶೀರ್ವಾದ್ ಸೇವಾ ಸಂಘ ಆಶ್ರಯದಲ್ಲಿ ಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್ 3"