
ಬಂಟ್ವಾಳ: ತಾಲೂಕಿನ ಮಂಚಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ನ ವತಿಯಿಂದ ಸಂಸ್ಕೃತಿ ಉತ್ಸವ ಕಾರ್ಯಕ್ರಮವು ಮಂಚಿ- ಕುಕ್ಕಾಜೆಯ ಶ್ರೀ ಸಿದ್ದಿ ವಿನಾಯಕ ಭಜನಾ ಮಂದಿರದಲ್ಲಿ ಡಿ.30 ಮತ್ತು 31 ರಂದು ನಡೆಯಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.30 ರಂದು ಸಂಜೆ 5 ಗಂಟೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಲಿದ್ದು, ನಿವೃತ್ತ ತಹಸೀಲ್ದಾರ್ ಕೆ. ಮೋಹನ ರಾವ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಸಿದ್ದಿ ವಿನಾಯಕ ಭಜನಾ ಮಂದಿರ ನವೀಕರಣ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ, ನಿ. ವಿಟ್ಲ ಅಧ್ಯಕ್ಷ ರಾಮ ಕಿಶೋರ್ ಮಂಚಿ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಕಿನ್ನರ ಮೇಳ ತುಮರಿ ಇವರಿಂದ ಕೆ.ಜಿ.ಕೃಷ್ಣಮೂರ್ತಿ ಇವರ ನಿರ್ದೇಶನದ “ಮರವೇ ಮಕ್ಕರದೇ” ಎಂಬ ನಾಟಕ ಪ್ರದರ್ಶನಗೊಳ್ಳಲಿಕ್ಕಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.31ರಂದು ಸಂಜೆ 4 ಗಂಟೆಗೆ ಅಡಕೆ ಪತ್ರಿಕೆಯ ಸಹಕಾರದಲ್ಲಿ ಮಂಚಿ ಶ್ರೀನಿವಾಸ ಆಚಾರ್ ಸ್ಮರಣಾರ್ಥ ವಿಚಾರಗೋಷ್ಠಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು,ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಎಸ್.ಆರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ನೂಜಿಬೈಲ್ ಅನುದಾನಿತ, ಹಿ.ಪ್ರಾ. ಶಾಲೆ ಸಂಚಾಲಕರಾದ ನೂಜಿಬೈಲು ನಾರಾಯಣ ಭಟ್ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಡಕೆ ಕೃಷಿಯಲ್ಲಿನ ಜ್ವಲಂತ ಸಮಸ್ಯೆಗಳು’ ಎಂಬ ವಿಷಯದ ಬಗ್ಗೆ ಪಡಾರು ರಾಮಕೃಷ್ಣ ಶಾಸ್ತ್ರಿ, ವಿಚಾರ ಮಂಡಿಸಲಿದ್ದಾರೆ. ನಾ.ಕಾರಂತ ಪೆರಾಜೆ ಅವರು ಗೋಷ್ಠಿಯ ನಿರ್ವಹಣೆ ಮಾಡಲಿದ್ದಾರೆ. ಬಳಿಕ ಮಂಜುಳಾ ಸುಬ್ರಹ್ಮಣ್ಯ ಭಟ್, ಇವರಿಂದ ಹರಿಕಥೆ ಹಾಗೂ ಶಿವರಂಜಿನಿ ಕಲಾಕೇಂದ್ರ ಪೊಳಲಿ ಬೊಕ್ಕಸ, ಸದಸ್ಯರಿಂದ “ಯಕ್ಷಗಾನ ನಾಟ್ಯ ಪ್ರಾತ್ಯಕ್ಷಿಕ’ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Be the first to comment on "B V KARANTA: ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಸಂಸ್ಕೃತಿ ಉತ್ಸವ"