ಬಂಟ್ವಾಳ: ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಪುಂಜಾಲಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ ವಿಟ್ಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

PRASHANTH PUNJALAKATTE and MOHAMMAD ALI VITTLA
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾರ್ಗದರ್ಶನದಲ್ಲಿ ಮಂಗಳವಾರ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದು, ಚುನಾವಣಾಧಿಕಾರಿ ಸುರೇಶ ಡಿ ಪಳ್ಳಿ ಯವರು ಅವಿರೋಧವಾಗಿ ಆಯ್ಕೆಯಾದ ನೂತನ ಆಡಳಿತ ಮಂಡಳಿಯನ್ನು ಘೋಷಿಸಿದರು. ಸಂಘದ ಅಧ್ಯಕ್ಷ ಸಹಿತ ಐದು ಪದಾಧಿಕಾರಿಗಳ ಸ್ಥಾನ, ಐದು ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಮಂಗಳವಾರ ಬೆಳಿಗ್ಗೆ 10 ರಿಂದ 11:30 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 10 ಸ್ಥಾನಗಳಿಗೆ 10 ನಾಮಪತ್ರಗಳು ಮಾತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ, ನಾಮಪತ್ರ ಪರಿಶೀಲನೆಗ ಹಾಗೂ ನಾಮಪತ್ರ ಹಿಂತೆಗೆತದ ನಿಗದಿತ ಅವಧಿಯ ಬಳಿಕ, ನಾಮಪತ್ರ ಸಲ್ಲಿಸಿದ್ದ ಎಲ್ಲಾ ಹತ್ತು ಮಂದಿಯನ್ನು ಚುನಾವಣಾ ಧಿಕಾರಿಗಳು ಅವಿರೋಧ ಆಯ್ಕೆ ಎಂದು ಘೋಷಿಸಿದರು. ಕೋಶಾಧಿಕಾರಿಯಾಗಿ ಚಂದ್ರ ಶೇಖರ ಕಲ್ಮಲೆ, ಉಪಾಧ್ಯಕ್ಷರಾಗಿ ರಮೇಶ್ ಕೆ. ಪುಣಚ(ವಿಷ್ಣುಗುಪ್ತ ಪುಣಚ) ಹಾಗೂ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ತಲಪಾಡಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಗೆ ವೆಂಕಟೆಶ್ ಬಂಟ್ವಾಳ, ರತ್ನದೇವ್ ಪುಂಜಾಲಕಟ್ಟೆ, ಉದಯಶಂಕರ ನೀರ್ಪಾಜೆ, ವಾಮನ ಪೊಳಲಿ ಹಾಗೂ ಮೌನೇಶ ವಿಶ್ವಕರ್ಮ ಆಯ್ಕೆಯಾದರು. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಜಿಲ್ಲಾ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಅಭಿನಂದಿಸಿದರು. ಈ ಸಂದರ್ಭ ಚುನಾವಣಾಧಿಕಾರಿ ಸುರೇಶ್ ಡಿ ಪಳ್ಳಿ, ಸಹಾಯಕ ಚುನಾವಣಾಧಿಕಾರಿ ಜಯಶ್ರೀ ನವೀನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂದೀಪ್ ಸಾಲ್ಯಾನ್ , ಪತ್ರಕರ್ತರಾದ ಗಣೇಶ್ ಪ್ರಸಾದ್ ಪಾಂಡೇಲು, ಕಿಶೋರ್ ಪೆರಾಜೆ, ಕಿರಣ್ ಸರಪಾಡಿ, ಹರೀಶ್ ಮಾಂಬಾಡಿ ಯಾದವ ಅಗ್ರಬೈಲು ಮೊದಲಾದವರು ಉಪಸ್ಥಿತರಿದ್ದರು


Be the first to comment on "ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಶಾಂತ್ ಪುಂಜಾಲಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಆಲಿ ವಿಟ್ಲ ಅವಿರೋಧ ಆಯ್ಕೆ"