ಮಕ್ಕಳು ತಮ್ಮ ಸಕಾರಾತ್ಮಕ ಚಿಂತನೆಗಳಿಂದ ಬದುಕಿನಲ್ಲಿ ಧನ್ಯತೆ ಮತ್ತು ಮಾನ್ಯತೆಯನ್ನು ಗಳಿಸಬಹುದಾಗಿದೆ. ಮಕ್ಕಳ ಬೌದ್ಧಿಕ ವಿಕಾಸಕ್ಕೆ ಮಾತ್ರವೇ ಹೆಚ್ಚು ಮಹತ್ವ ನೀಡಿ, ಮಾನಸಿಕ ವಿಕಾಸದತ್ತ ಅಸಡ್ಡೆ ತೋರಿದರೆ ಅವರು ವಿದ್ಯಾವಂತರಾದರೂ ಮುಂದೆ ಸಮಾಜ ಘಾತುಕರಾಗುವ ಅಪಾಯವಿದೆ. ಜ್ಞಾನ ದಾನಕ್ಕಿಂದ ಧನ ಸಂಚಯನದ ಗುರಿ ಪ್ರಮುಖವಾದಾಗ, ಸಾಮಾಜಿಕ ಅಲ್ಲೋಲ ಕುಲ್ಲೋಲಗಾಳಾಗುತ್ತವೆ ಎಂದು ಬಂಟ್ವಾಳ ತಾಲೂಕು ಮಕ್ಕಳ ಕಲಾಲೋಕದ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅದ್ಯಾಪಕ ರಮೇಶ ಎಂ ಬಾಯಾರು ಹೇಳಿದರು.

ಕಡೇಶಿವಾಲಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ರಾವ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಕನ್ನೊಟ್ಟು, ನಿಕಟಪೂರ್ವ ಆಧ್ಯಕ್ಷರಾದ ಸುರೇಶ್ ಶೆಟ್ಟಿಗಾರ್ ಬನಾರಿ, ಪಂಚಾಯತ್ ಸದಸ್ಯರಾದ ಶೀನ ನಾಯ್ಕ್ ನೆಕ್ಕಿಲಾಡಿ, ವಶಿತಾ, ಪ್ರಮೀಳಾ, ಜಯಾ ಆರ್ ದೇವಾಡಿಗ, ಗೀತಾ, ನಳಿನಾಕ್ಷಿ, ಆಂಗ್ಲ ಮಾಧ್ಯಮ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾಧವ ರೈ ಭಂಡಸಾಲೆ, ಕೋಶಾಧಿಕಾರಿಗಳಾದ ವಿದ್ಯಾಧರ ರೈ, ಕಡೇಶಿವಾಲಯ ಕೆದಿಲ ಕ್ಲಸ್ಟರ್‌ಗಳ ಸಂಪನ್ಮೂಲ ವ್ಯಕ್ತಿ ಸುಧಾಕರ ಭಟ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹರೀಶ್ ರಾವ್ ಎನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶರತ್, ನಿವೃತ್ತ ಯೋಧ ಬಿಳಿಯೂರು ಗುತ್ತು ಕುರುಂಬ್ಲಾಜೆ ಕಿಟ್ಟಣ್ಣ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ನೆಡ್ಲೆ ಶಿವರಾಮ ಭಟ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕ ಬಾಬು ಪೂಜಾರಿ ಕೆ. ಸ್ವಾಗತಿಸಿದರು. ಗೌರವ ಶಿಕ್ಷಕಿ ಮಮತಾ ಶಾಲಾ ವಾರ್ಷಿಕ ವರದಿ ವಾಚಿಸಿದರು. ಸಹಶಿಕ್ಷಕ ಪಿರಾಜಿ ವಾಬಳೆ ವಂದಿಸಿದರು. ಸಹ ಶಿಕ್ಷಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿದರು.
ಸಿ.ಆರ್.ಪಿ ಸತೀಶ್ ರಾವ್, ಗೀತಾಲಕ್ಷ್ಮೀ ,ಶಿಕ್ಷಕಿಯರಾದ ದಿವ್ಯಾ ಪ್ರಜ್ಞಾ, ಅನ್ನಪೂರ್ಣ, ಅಶ್ವಿನಿ, ಸ್ವಾತಿ, ಪ್ರೀತಿಕಾ, ಜ್ಯೋತಿ, ಜಯಲಕ್ಷ್ಮೀ, ಪವನಶ್ರೀ ಮತ್ತು ಶಾಲಾ ಎಸ್.ಡಿ. ಎಂ. ಸಿ. ಸದಸ್ಯರು ಸಹಕರಿಸಿದರು.


Be the first to comment on "ಕಡೇಶಿವಾಲಯ ಸರಕಾರಿ ಪ್ರಾಥಮಿಕ ಶಾಲೆ ಪ್ರತಿಭಾ ಪುರಸ್ಕಾರ"