ಪಾಣೆಮಂಗಳೂರು ಎಸ್ ವಿ ಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ದಿ. ನಾಟಿ ಕೃಷ್ಣರಾಜ ಶೆಟ್ಟಿ ಅವರ ನುಡಿನಮನ ಕಾರ್ಯಕ್ರಮ ಶಾಲೆಯಲ್ಲಿ ಶನಿವಾರ ನಡೆಯಿತು.

ಬೊಂಡಾಲ ಜಗನ್ನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮಾತನಾಡಿ, ಕೃಷ್ಣರಾಜ ಶೆಟ್ಟಿ ಎಲ್ಲರ ಜೊತೆ ಹೊಂದಾಣಿಕೆ ವ್ಯಕ್ತಿತ್ವದವರು. ಅನ್ಯೋನ್ಯ ಸಂಬಂಧ ಹೊಂದಿದ್ದರು.ಅವರ ಶಾಲೆಯ 38 ವರ್ಷಗಳ ವೃತ್ತಿ ಸೇವೆಯು ಶಿಸ್ತುಬದ್ಧತೆಯಿಂದ ಕೂಡಿತ್ತು. ಯಕ್ಷಗಾನ ತಾಳಮದ್ದಳೆ ಅರ್ಥದಾರಿ, ಶಿಕ್ಷಣ ತಜ್ಞರು. ತಬಲಾ ವಾದಕರು, ಸಾಮಾಜಿಕ ಚಿಂತಕ, ಶ್ರೇಷ್ಟ ಶಿಕ್ಷಕ, ಎಲ್ಲರ ಹಿತೈಷಿಯಾಗಿದ್ದರು ಎಂದರು.
ಶಾಲಾ ಸಂಚಾಲಕ, ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಸ್ಥಾನದ ಮೊಕ್ತೇಸರ ಎನ್ .ಪ್ರಮೋದ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ನರಿಕೊಂಬು ವೈದ್ಯ ಡಾ ಸುಬ್ರಹಣ್ಯ ಭಟ್ ಮಾತನಾಡಿ, ಕೃಷ್ಣರಾಜ ಶೆಟ್ಟಿ ಶಿಸ್ತು ಸರಳ ವ್ಯಕ್ತಿತ್ವದವರು. ಆತ್ಮೀಯ ಗೆಳೆತನ ಅವರಲ್ಲಿತ್ತು. ಕಲೆ ಶಿಕ್ಷಣದಲ್ಲಿ ಅವರಲ್ಲಿ ಅಪಾರ ಜ್ಞಾನವಿತ್ತು.ಆಗಲಿಕೆಯ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದರು.
ನಾರಿಕೊಂಬು ಯಕ್ಷಗಾನ ಸಂಘದ ಅಧ್ಯಕ್ಷ ಸುರೇಶ್ ರಾವ್ ಮಾತನಾಡಿ ,ನಮ್ಮ ಯಕ್ಷಗಾನ ಸಂಘ ಉಳಿಸಿ ಬೆಳೆಸಲು ಮಾಸ್ಟ್ರು ಶ್ರಮಿಸಿದ್ದಾರೆ ಎಂದರು.
ಮೃತರ ಪುತ್ರಿ ಶಾಂತಿ ಮಾತನಾಡಿ, ಮಾಸ್ಟ್ರು ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕ, ಕುಟುಂಬಕ್ಕೆ ಒಡನಾಡಿ, ಎಲ್ಲರ ಕ್ಷೇಮದ ವಿಚಾರ ಮಾಡುತ್ತಿದ್ದರು. ಅವರ ಧ್ಯೇಯವನ್ನು ಮುಂದುವರಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಅಭಿಮಾನಿಗಳಾದ ಎಂ. ಎನ್. ಕುಮಾರ್, ಬಿ. ಸಿ. ರೋಡ್ ಸಂಜೀವ ಶೆಟ್ಟಿ, ಬಿ. ರಾಮಚಂದ್ರ ರಾವ್, ಅಬ್ಬೆಯಮಜಲು ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರ ಅಧ್ಯಕ್ಷ ಕರ್ಬೆಟ್ಟು ಕೃಷ್ಣರಾಜ್ ಭಟ್, ಗಣೇಶ್ ನಾಯಕ್, ನಿವೃತ್ತ ಶಿಕ್ಷಕ ಜಯಂತ ನಾಯಕ್, ಜಲಜಾಕ್ಷಿ, ರಾಜ್ ಬಂಟ್ವಾಳ್, ಜಯರಾಮ ಪೂಜಾರಿ, ಸನ್ಮತಿ ಜಯಕೀರ್ತಿ ಇಂದ್ರ, ಗೂಡಿನಬಳಿ ಶಿಕ್ಷಕ ನೂರುದ್ದೀನ್, ಮಾಧವ ರಾವ್ , ಮೀರಾ ಟೀಚರ್, ಬಂಗ್ಲೆಗುಡ್ಡೆ ರವಿಚಂದ್ರ ಮಯ್ಯ, ಮೃತರ ಪುತ್ರ ಅಂಬಾಪ್ರಸಾದ್ ನುಡಿ ನಮನ ಮಾತು ಆಡಿದರು. ಪುತ್ರಿ ಅನಿತಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ವಿನೋದ್ ಎನ್. ಸ್ವಾಗತಿಸಿದರು. ಶಿಕ್ಷಕ ರಾಜೇಂದ್ರ ಗೌಡ ವಂದಿಸಿದರು.ನಿವೃತ್ತ ಶಿಕ್ಷಕ ಕೇಶವ ಮಾಸ್ಟರ್ ನಿರ್ವಹಿಸಿದರು. ನುಡಿನಮನ ಬಳಿಕ ಮೃತರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ ನಡೆಯಿತು


Be the first to comment on "ನಿವೃತ್ತ ಮುಖ್ಯ ಶಿಕ್ಷಕ ದಿ ನಾಟಿ ಕೃಷ್ಣರಾಜ ಶೆಟ್ಟಿ ನುಡಿನಮನ"