
ಪಾಣೆಮಂಗಳೂರು ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ಹವ್ಯಾಸಿ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ, ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ನಾಟಿ ಕೃಷ್ಣರಾಜ ಶೆಟ್ಟಿ (90) ಬೆಂಗಳೂರಿನ ಮಗಳ ಮನೆಯಲ್ಲಿ ಇಂದು ಶನಿವಾರ ಬೆಳಗ್ಗೆ ಸುಮಾರು 4 ಗಂಟೆಗೆ ನಿಧನ ಹೊಂದಿದ್ದಾರೆ. ಅವರು ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು, ಶಿಷ್ಯವೃಂದವನ್ನು ಹೊಂದಿದ್ದರು. ಅವರ ಪಾರ್ಥಿವ ಶರೀರ ಇಂದು ಅಪರಾಹ್ನ ಸುಮಾರು 12 ಗಂಟೆಗೆ ನರಿಕೊಂಬು ಗ್ರಾಮದ ಮಾಣಿಮಜಲಿನಲ್ಲಿರುವ ಅವರ ಸ್ವಗೃಹಕ್ಕೆ ಬರಲಿದೆ



Be the first to comment on "ನಿವೃತ್ತ ಮುಖ್ಯೋಪಾಧ್ಯಾಯ ನಾಟಿ ಕೃಷ್ಣರಾಜ ಶೆಟ್ಟಿ ನಿಧನ"