ಬಂಟ್ವಾಳ ಜಮಿಯತುಲ್ ಫಲಾಹ್ ವತಿಯಿಂದ ವಕ್ಫ್ ಆಸ್ತಿ ಉಮೀದ್ ಪೋರ್ಟಲ್ ನಲ್ಲಿ ನೋಂದಣಿ ಕಾರ್ಯಕ್ರಮ.ಮೆಲ್ಕಾರ್ ನ ಕಚೇರಿಯಲ್ಲಿ ನಡೆಯಿತು.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಹಾಗೂ ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ ಇವುಗಳಸಹಯೋಗದೊಂದಿಗೆ ಬುಧವಾರ ಕಾರ್ಯಕ್ರಮ ನಡೆಯಿತು. ಫಲಾಹ್ ನ ಪೂರ್ವಾದ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಉದ್ಘಾಟಿಸಿದರು. ಘಟಕಾದ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ವಿವಿಧೆಡೆ ಇದೇ ರೀತಿ ನೋಂದಣಿ ಕಾರ್ಯಕ್ರಮ ಉಚಿತವಾಗಿ ನಡೆಸಿಕೊಟ್ಟ ಮಲಾರ್ ಅರಸ್ತಾನ ಜುಮಾ ಮಸೀದಿ ಖತೀಬ್ ಶಫೀಕ್ ಕೌಸರಿ ಕುಕ್ಕಾಜೆ ಅವರನ್ನು ಗೌರವಿಸಲಾಯಿತು.
ಜಮೀಯ್ಯತುಲ್ ಫಲಾಹ್ ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ಮೊಹಮ್ಮದ್, ಕೆ.ಎಸ್. ಮೊಹಮ್ಮದ್, ಶೇಖ್ ರಹಮತುಲ್ಲಾ ಭಾಗವಹಿಸಿದ್ದರು. ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ನಿರೂಪಿಸಿದರು. ಆಶಿಕ್ ಕುಕ್ಕಾಜೆ ವಂದಿಸಿದರು.


Be the first to comment on "ವಕ್ಫ್ ಆಸ್ತಿ ನೋಂದಣಿ: ಬಂಟ್ವಾಳ ಜಮೀಯತುಲ್ ಫಲಾಹ್ ನಿಂದ ಕಾರ್ಯಕ್ರಮ"