
ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬ ನಿಮಿತ್ತ ಬಂಟ್ವಾಳ ತಾಲೂಕಿನ ಗುಡ್ಡೆಯಂಗಡಿಯಲ್ಲಿರುವ ನಮ್ಮ ಹಿರಿಯರ ಮನೆ ಆಶ್ರಮದಲ್ಲಿ ವೃದ್ಧರಿಗೆ ಆಹಾರ ಸಾಮಗ್ರಿಗಳು ಹಾಗೂ ಹಣ್ಣು ಹಂಪಲು ವಿತರಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಕಾರ್ಯಕರ್ತರು, ತಾಲೂಕು ಜನಜಾಗೃತಿ ಸದಸ್ಯರು, ಒಕ್ಕೂಟದ ಸದಸ್ಯರು ಸೇರಿಕೊಂಡು ಕಾರ್ಯಕ್ರಮವನ್ನು ನಡೆಸಿದರು. ಪ್ರಮುಖರಾದ ಎನ್.ಪ್ರಕಾಶ್ ಕಾರಂತ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜ, ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ., ಶೌರ್ಯ ಘಟಕದ ಪ್ರತಿನಿಧಿ ಪ್ರವೀಣ್ ಕಾಡಬೆಟ್ಟು, ಕೇಂದ್ರ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಸದಾನಂದ ನಾವೂರ, ಸದಾನಂದ ಸೀತಾಳ, ಶಶಿಧರ ಆಚಾರ್ಯ, ದೇವಪ್ಪ ಕುಲಾಲ್, ಜನಾರ್ದನ ಆಚಾರ್ಯ, ಆಶ್ರಮದ ಮ್ಯಾನೇಜರ್ ರಾಮಣ್ಣ ಗೌಡ, ತಾಲೂಕಿನ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರು, ಆಶ್ರಮದ ವೃದ್ಧರು ಉಪಸ್ಥಿತರಿದ್ದರು.


Be the first to comment on "”ನಮ್ಮ ಹಿರಿಯರ ಮನೆ”ಯಲ್ಲಿ ಡಾ. ಹೆಗ್ಗಡೆ ಹುಟ್ಟುಹಬ್ಬ ಸಂಭ್ರಮಾಚರಣೆ"