
ಹರೀಶ ಮಾಂಬಾಡಿ
ಸಿನಿಮಾಕ್ಕೆ ಡಾ.ಶಿವರಾಮ ಕಾರಂತರ ಚೋಮನ ದುಡಿ ಪ್ರೇರಣೆ ಎಂದರು ನಿರ್ದೇಶಕ ಅನಿಲ್ ದೋರಸಮುದ್ರ.
ಮಾಡಿದರೆ ಇಂಥ ಪಾತ್ರ ಮಾಡಬೇಕು ಎಂಬ ಕನಸಿತ್ತು, ಅದೀಗ ಸಾಕಾರಗೊಳ್ಳುವ ಹಂತದಲ್ಲಿದೆ ಎಂದರು ಕಾಳ ಪಾತ್ರಧಾರಿ ಚೆಲುವರಾಜ್ ಗೌಡ.

ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಟ್ರೇಲರ್ ನೋಡಿ

ಸಿನಿಮಾ ಪ್ರಚಾರ
ಬೆಂಗಳೂರಿನ ಜಯನಗರದ ಶಾಲಿನಿ ಗ್ರೌಂಡ್ಸ್ ನಲ್ಲಿ ವೀರಲೋಕ ಪುಸ್ತಕಸಂತೆಗೆ ಆಗಮಿಸುವ ಸಾಹಿತ್ಯಪ್ರಿಯರ ಗಮನ ಸೆಳೆಯುವಂತೆ ಟ್ರೇಲರ್ ಕುರಿತ ಕ್ಯೂಆರ್ ಕೋಡ್ ಪ್ರದರ್ಶಿಕೆಯನ್ನು ಹಿಡಿದು ವಿಜಯ್ ಹಾಗೂ ಕಾಳ ಪಾತ್ರಧಾರಿ ಚೆಲುವರಾಜ್ ಗೌಡ ನಿಂತಿದ್ದರು. ಕುತೂಹಲಕಾರಿ ಶೀರ್ಷಿಕೆಯ ಸಿನಿಮಾ ಕುರಿತು ಕೇಳಿದಾಗ ನಾವು ಕಾರಂತರ ಚೋಮನ ದುಡಿ ಪ್ರೇರಣೆಯಿಂದ ಸಿನಿಮಾ ಮಾಡಿದ್ದೇವೆ. ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.

ಅನಿಲ್ ದೋರಸಮುದ್ರ ಮತ್ತು ನವೀನ್ ಸಿಂಬಾವಿ ನಿರ್ಮಾಣದ ಬಿಚ್ಚುಗತ್ತಿಯ ಬಂಟನ ಬಲ್ಲಿರೇನ… ಸಿನಿಮಾದ ಟ್ರೇಲರ್ ಹೊರಬಿದ್ದಿದೆ. ಯೂಟ್ಯೂಬ್ ನಲ್ಲಿ ಉತ್ತಮ ಸ್ಪಂದನೆಯೂ ದೊರಕಿದೆ.
ದಶಕಗಳ ಹಿಂದಿನ ಶೋಷಣೆ, ಕ್ರೌರ್ಯ, ಅಸಹಾಯಕತೆ, ರೋಷದ ಕತೆ ಹೇಳುವ ಕಡಲತೀರದ ಭಾರ್ಗವ ಡಾ.ಶಿವರಾಮ ಕಾರಂತರ ಚೋಮನ ದುಡಿಯನ್ನು ಅಷ್ಟೇ ಪರಿಣಾಮಕಾರಿಯಾಗಿ ದೃಶ್ಯರೂಪಕ್ಕೆ ತಂದವರು ಬಿ.ವಿ.ಕಾರಂತರು. ಕನ್ನಡ ಸಿನಿಮಾದ ಇತಿಹಾಸದ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ಅದು ಚಿರಸ್ಥಾಯಿ. ಈಗ ಅದನ್ನೇ ಪ್ರೇರಣೆಯಾಗಿಟ್ಟುಕೊಂಡು ಅನಿಲ್ ದೋರಸಮುದ್ರ ಎಂಬ ಕನಸುಕಂಗಳ ಯುವಕ ಸಿನಿಮಾ ಮಾಡಿದ್ದಾರೆ.
ಚೋಮನ ದುಡಿ ಸಿನಿಮಾದಲ್ಲಿ ವಾಸುದೇವ ರಾವ್ ಚೋಮನ ಪಾತ್ರ ಮಾಡಿದ್ದು ಇತಿಹಾಸ. ಇದೀಗ ಪ್ರಬುದ್ಧ ಕಲಾವಿದರಾದ ಹಾಗೂ ಕಾಂತಾರದ ಎರಡೂ ಭಾಗಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ರಂಗನಿರ್ದೇಶಕ ಬಾಸುಮ ಕೊಡಗು ಚೋಮನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಹೇಗಿದೆ ಎಂದು ತಿಳಿಯಬೇಕಾದರೆ ನವೆಂಬರ್ 28ರಂದು ಚಿತ್ರಮಂದಿರಕ್ಕೆ ಹೋಗಿ ನೋಡಬೇಕು


Be the first to comment on "‘ದುಡಿ’ಯ ಸದ್ದು, ಬಿಚ್ಚುಗತ್ತಿಯ ಹಿಡಿದ ಕಾಳನ ಕತೆ ಏನು?"