ಜೈನ್ ಮಿಲನ್ ಬಂಟ್ವಾಳ ಮತ್ತು ಅಜ್ಜಿ ಬೆಟ್ಟು ಜಿನ ಚೈತ್ಯಾಲಯದ ಶ್ರಾವಕರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಘಟಕದ ಜಿನ ಭಜನೆ -ವೈಯಕ್ತಿಕ ಮತ್ತು ಅಂತಾಕ್ಷರಿ ಸ್ಪರ್ಧೆಯು ಅಜ್ಜಿಬೆಟ್ಟು ಬಸದಿ ಪದ್ಮಾವತಿ ಸಭಾಭವನದಲ್ಲಿ ನಡೆಯಿತು.

ಬಸದಿಯ ಪುರೋಹಿತರು, ಜೈನ್ ಮಿಲನ್ ನ ಪೂರ್ವಾಧ್ಯಕ್ಷರಾದ ವೀರ್ ವೃಷಭ ಕುಮಾರ ಇಂದ್ರ ಮತ್ತು ಅತಿಥಿಗಳು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ನಡೆದ ಜಿನಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ 62 ಸ್ಪರ್ಧಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ವೀರ್ ಮಿತ್ರಸೇನ ಜೈನ್ ಅಳದಂಗಡಿ , ವೀರಾಂಗನ ಚಂದನ ಬ್ರಿಜೇಶ್ , ಡಾ. ಸೀಮಾ ಸುದೀಪ್ ಕುಮಾರ್ ರವರು ಸಹಕರಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ವೀರ್ ರಾಜೇಂದ್ರ ಜೈನ್ ಪೆರ್ಲ ಅಧ್ಯಕ್ಷತೆಯಲ್ಲಿ , ವೀರ ಸುದರ್ಶನ್ ಜೈನ್, ಮಂಗಳೂರು ವಲಯ 8 ರ ಉಪಾಧ್ಯಕ್ಷರು, ವೀರ್ ಸುಭಾಶ್ಚಂದ್ರ ಜೈನ್ ಕಾರ್ಯದರ್ಶಿಗಳು , ವೀರ್ ಪ್ರಮೋದ್ ಕುಮಾರ್ ವೇಣೂರು, ನಿರ್ದೇಶಕರು, ವೀರ್ ವೃಷಭರಾಜ ಇಂದ್ರ, ವೀರ್ ಪ್ರಭಾಕರ ಜೈನ್ ಇವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಮಾರೋಪದಲ್ಲಿ ಅಧ್ಯಕ್ಷರು ಮಾತನಾಡಿ ಭಾಗವಹಿಸಿದ ಎಲ್ಲಾ ಸ್ಪರ್ದಾಳುಗಳಿಗೆ ಅಭಿನಂದನೆ ಸಲ್ಲಿಸಿದರು. ವೀರ್ ಹರ್ಷೇಂದ್ರ ಬಲ್ಲಾಳ್ ಸ್ವಾಗತವನ್ನು ನೆರವೇರಿಸಿದರು, ವೀರ್ ಭರತ್ ಕುಮಾರ್ ಬಹುಮಾನ ವಿತರಣೆಯನ್ನು ನಿರ್ವಹಿಸಿದರು. ವರದಿ ವಾಚನ ಮತ್ತು ವಂದನಾರ್ಪಣೆಯನ್ನು ಕಾರ್ಯದರ್ಶಿ ವೀರ್ ಜಯಕೀರ್ತಿ ನೆರವೇರಿಸಿದರು. ಕಾರ್ಯಕ್ರಮವು ವೀರಾಂಗಾನಾ ವಿನಯಕುಮಾರಿ ಸಿದ್ದಕಟ್ಟೆ ಇವರ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.


Be the first to comment on "ಅಜ್ಜಿಬೆಟ್ಟು ಬಸದಿ ಸಭಾಂಗಣದಲ್ಲಿ ಜಿನಭಜನೆ, ವೈಯಕ್ತಿಕ ಅಂತಾಕ್ಷರಿ ಸ್ಪರ್ಧೆ"