
ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 26ರಂದು ಬೆಳಗ್ಗೆ ವಿಶ್ವರೂಪದರ್ಶನ ಸೇವೆ ನಡೆಯಲಿದೆ. ವಿಶ್ವಾವಸು ನಾಮ ಸಂವತ್ಸರದ ಕಾರ್ತಿಕ ಶುದ್ಧ ಪಂಚಮಿಯಾದ ಭಾನುವಾರ ಪ್ರಾತಃಕಾಲ 4 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ತಿರುಮಲ ವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಲೋಕಕಲ್ಯಾಣಕ್ಕಾಗಿ 24ನೇ ವರ್ಷದ ವಿಶ್ವರೂಪದರ್ಶನ ಸೇವೆಯನ್ನು ದಿವ್ಯಜ್ಯೋತಿ ಬೆಳಗಿಸಿ ಸಮಸ್ತ ಭಜಕ ವೃಂದದವರ ಸಹಕಾರದೊಂದಿಗೆ ಜರುಗಿಸುವುದಾಗಿ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದ ವಿವರಗಳು ಹೀಗಿವೆ. ಪ್ರಾತಕಾಲ 5 ಗಂಟೆಗೆ ಕಾಕಡಾರತಿ, ಜಾಗರ ಪೂಜೆ ನಂತರ ವಿಶೇಷಾಲಂಕಾರ ಶ್ರೀ ದೇವರ ವಿಶೇಷ ವಿಶ್ವರೂಪದರ್ಶನ ಭಾಗ್ಯ, ಪ್ರಸಾದ ವಿತರಣೆ. ಬೆಳಿಗ್ಗೆ 4.30 ರಿಂದ 7ರ ವರೆಗೆ ಸಂತ ವಾಣಿ ಭಜನಾ ಕಾರ್ಯಕ್ರಮ ಜರುಗಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



Be the first to comment on "26ರಂದು ಬೆಳಗ್ಗೆ ಬಂಟ್ವಾಳ ದೇವಸ್ಥಾನದಲ್ಲಿ ವಿಶ್ವರೂಪದರ್ಶನ"