

ದಾರಿಮೀಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲೆಯ 24ನೇ ವಾರ್ಷಿಕೋತ್ಸವ ಹಾಗೂ ಶಂಸುಲ್ ಉಲಮಾ ಆಂಡ್ ನೇರ್ಚೆ, ಸಮಸ್ತ 100ನೇ ಅಂತಾರಾಷ್ಟ್ರೀಯ ಮಹಾಸಮ್ಮೇಳನದ ಮತ್ತು ನಂದಿ ದಾರುಸ್ಸಲಾಂ 50ನೇ ವಾರ್ಷಿಕ ಪ್ರಚಾರ ಸಭೆ ಪಾಣೆಮಂಗಳೂರಿನ ಅಕ್ಕರಂಗಡಿಯ ಎಚ್.ಎನ್. ಕನ್ವೆನ್ಶನ್ ಸೆಂಟರ್ ನಲ್ಲಿ ಮಂಗಳವಾರ ಅ.21ರಂದು ಬೆಳಗ್ಗೆ 9ರಿಂದ ನಡೆಯಲಿದೆ. ದಾರಿಮೀಸ್ ಪ್ರಮುಖರಾದ ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷರಾದ ಸಯ್ಯುದುಲ್ ಉಲಮಾ ಶೈಖುನಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ಸಮಾರಂಭ ಉದ್ಘಾಟಿಸಲಿದ್ದು, ಜಾಮಿಆ ದಾರುಸ್ಸಲಾಮಿನ ಶೈಖುನಾ ಎ.ವಿ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಸಮಸ್ತ ಕೇಮದ್ರ ಮುಶಾವರದ ಸದಸ್ಯರಾದ ಶೈಖುನಾ ಬಿ.ಕೆ.ಅಬ್ದುಲ್ ಖಾದಿರ್ ಆಲ್ ಖಾಸಿಮಿ ಬಂಬ್ರಾಣ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಅವರು ಸಂದೇಶ ಭಾಷಣ ಮಾಡಲಿದ್ದಾರೆ. ಸಯ್ಯಿದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿಯವರು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದು, ಜಿಲ್ಲಾ ದಾರಿಮೀಸ್ ಸಮಿತಿ ಅಧ್ಯಕ್ಷರಾದ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿಯವರು ಸಭೆಯ ಆಧ್ಯಕ್ಷತೆ ವಹಿಸಲಿದ್ದು, ಸ್ವಾಗತ ಸಮಿತಿ ಕನ್ವೀನರ್ ಕೆ.ಎಂ.ಖಾಸಿಂ ದಾರಿಮಿ ಸವಣೂರು ಸ್ವಾಗತಿಸಲಿದ್ದಾರೆ. ಝುಬೈರ್ ದಾರಿಮಿ ಅಕ್ಕರಂಗಡಿ, ಎನ್.ಎಚ್.ಹೈದರ್ ದಾರಿಮಿ ಅಸೈಗೋಳಿ ಭಾಷಣ ಮಾಡಲಿದ್ದು, ಹನೀಫ್ ದಾರಿಮಿ ಸವಣೂರು ವಂದಿಸಲಿದ್ದಾರೆ ಎಂದರು.ಪ್ರಮುಖರಾದ ಎಸ್.ಎಚ್. ಹೈದರ್ ದಾರಿಮಿ , ಕೆಎಂ ಖಾಸಿಮ್ ದಾರಿಮಿ ಸವಣೂರು, ಜುಬೈರ್ ದಾರಿಮಿ ಅಕ್ಕರಂಗಡಿ ಉಪಸ್ಥಿತರಿದ್ದರು.


Be the first to comment on "ಅ.21ರಂದು ಅಕ್ಕರಂಗಡಿಯಲ್ಲಿ ಶಂಸುಲ್ ಉಲಮಾ ಆಂಡ್ ನೇರ್ಚೆ, ದಾರಿಮೀಸ್ ದ.ಕ. 24ನೇ ವಾರ್ಷಿಕೋತ್ಸವ, ಸಮಸ್ತ 100ನೇ ಪ್ರಚಾರ ಸಭೆ"