
ಬಂಟ್ವಾಳ: ತೆಂಗಿನಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿ ಕಾಲುಗಳ ಸ್ವಾಧೀನವನ್ನೇ ಕಳೆದುಕೊಂಡು, ಮಲಗಿದ್ದ ಸ್ಥಿತಿಯಲ್ಲೇ ಇರಬೇಕಾಗಿರುವ ವಿಟ್ಲದ ರವೀಂದ್ರ ನಾಯ್ಕ್ ಅವರಿಗೆ ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ದಾಸಕೋಡಿಯ ಕಲಾಶ್ರಯದ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು, ತಮ್ಮ ಸಂಸ್ಥೆಯಾದ ಕಲಾಶ್ರಯ ದಾಸಕೋಡಿ ಮೂಲಕ ಹೊಸ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.

ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಮ್ಮುಖ ನೂತನ ಮನೆಯನ್ನು ಹಸ್ತಾಂತರಿಸಿದರು.



ತನ್ನ ಸಂಪಾದನೆಯ ಶೇ.50ರಷ್ಟನ್ನು ಬಡವರ ಸೇವಾ ಕಾರ್ಯಗಳಿಗೆ ವಿನಿಯೋಗಿಸುವ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಿರಿಯರಿಗೆ ವೃದ್ಧಾಪ್ಯ ವೇತನ, ಭೂರಹಿತ ಬಡವರಿಗೆ ಭೂದಾನ, ನಿವೇಶನರಹಿತರಿಗೆ ಮನೆ ನಿರ್ಮಾಣ ಇತ್ಯಾದಿ ಸೇವಾ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ.


Be the first to comment on "ಮನೆ ನಿರ್ಮಿಸಿಕೊಂಡುವ ಮೂಲಕ ಸಂಕಷ್ಟದಲ್ಲಿದ್ದವರಿಗೆ ಆಶ್ರಯವಾದ ಕಲಾಶ್ರಯ ದಾಸಕೋಡಿ"