

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಗಳಾಗಿಸಿ ನವ ಭಾರತದ ನಿರ್ಮಾಣದ ಅಡಿಪಾಯವಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ ಬೋಳಂತೂರು ಹೇಳಿದರು.
ಬೋಳಂತೂರು ಹಾಲು ಉತ್ಪಾದಕರ ಸಂಘದ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ.) ವಿಟ್ಲ ಕಲ್ಲಡ್ಕ ವಲಯದ ಸ್ವ- ಸಹಾಯ ಸಂಘಗಳ ಬೋಳಂತೂರು ಒಕ್ಕೂಟದ 20ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಬೋಳಂತೂರು ಒಕ್ಕೂಟ ಅಧ್ಯಕ್ಷೆ ಸೀತಾ ರಾಮಚಂದ್ರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಗೌರವ ಅಧ್ಯಕ್ಷರಾದ ಮಹಾಬಲ ರೈ ಉದ್ಘಾಟಿಸಿದರು.
ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಯೋಜನೆ ಕುರಿತು ವಿವರಿಸಿದರು. ವೇದಿಕೆಯಲ್ಲಿ ಬೋಳಂತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಬೋಳಂತೂರು ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ರೈ ನಾರ್ಶ, ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ ಯೋಜನೆ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ಕೆ ಎಂ ಎಫ್ ನಿರ್ದೇಶಕರಾದ ಸುಧಾಕರ ರೈ ಬೋಳಂತೂರು, ವಿಟ್ಲ ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಜಯರಾಮ್ ರೈ, ಸಿದ್ಧಿ ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಮುತ್ತಪ್ಪ ಮೂಲ್ಯ, ಕುಶಲಕರ್ಮಿ ರಾಮಚಂದ್ರ ಆಚಾರ್ಯ, ಗ್ರಾಮಾಭಿವೃದ್ಧಿ ಯೋಜನೆಯ ಬೋಳಂತರು ಒಕ್ಕೂಟ ಮಾಜಿ ಅಧ್ಯಕ್ಷ ಚೆನ್ನಪ್ಪ ಪೂಜಾರಿ ಗುಂಡಿಮಜಲು, ಶ್ರೀ ಶಾರದಾಂಬ ಭಜನಾ ಮಂದಿರ ಗುಂಡಿಮಜಲ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಬೋಳಂತೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹರೀಶ್, ಸದಾಶಿವ ನಾರ್ಶ್, ಬೋಳಂತೂರು ಅಂಚೆ ಮಾಸ್ಟರ್ ಜಯರಾಜ್ ಬೀರುಕೋಡಿ, ಮಾಜಿ ವಲಯ ಅಧ್ಯಕ್ಷರಾದ ಇಂತ್ರು ಮಾಸ್ಕರೇಸ್, ಗೊಳ್ತಾಮಜಲ್ ಎ ಒಕ್ಕೂಟದ ಅಧ್ಯಕ್ಷ ಮಮತಾ, ಮಾಮೇಶ್ವರ ಒಕ್ಕೂಟ ಅಧ್ಯಕ್ಷ ಹರೀಶ್ ವಿ ಮಾಡ, ಕೆಲಿಂಜ ಒಕ್ಕೂಟದ ಅಧ್ಯಕ್ಷ ದಯಾನಂದ ಗೌಡ, ವೀರಕಂಬ ಒಕ್ಕೂಟ ಅಧ್ಯಕ್ಷೆ ಶಾಂಭವಿ ಆಚಾರ್ಯ, ಗೋಳ್ತಮಜಲು ಒಕ್ಕೂಟ ಅಧ್ಯಕ್ಷ ಸೀತಾರಾಮ್ ಶೆಟ್ಟಿ, ಒಕ್ಕೂಟದ ಪದಾಧಿಕಾರಿಗಳಾದ , ಸುಧಾಮಣಿ ಪುಷ್ಪ ಬಿ ಶೆಟ್ಟಿ ಜಯಶ್ರೀ ಪುರುಷೋತ್ತಮ, ಸೇವಾ ಪ್ರತಿನಿಧಿಗಳಾದ ಗಣೇಶ್, ವಿದ್ಯಾ, ವಿಜಯ, ಸುಕನ್ಯ, ರೇವತಿ, ಯಶೋದ ಉಪಸ್ಥಿತರಿದ್ದರು.
ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಲೀಲಾವತಿ ವರದಿ ವಾಚಿಸಿ, ಒಕ್ಕೂಟ ಕಾರ್ಯದರ್ಶಿ ಚಂದ್ರಕಲಾ ವಂದಿಸಿದರು. ಮಮತಾ ಕಾರ್ಯಕ್ರಮ ನಿರಪಿಸಿದರು.


Be the first to comment on "ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೋಳಂತೂರು ಒಕ್ಕೂಟ ವಾರ್ಷಿಕೋತ್ಸವ"