ಗಡುವು ಮತ್ತು ಕಡ್ಡಾಯತೆ:
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಸುತ್ತೋಲೆಯ ಪ್ರಕಾರ, ನರೇಗಾ ಯೋಜನೆಯಲ್ಲಿ ಸಕ್ರಿಯವಾಗಿರುವ ಪ್ರತಿಯೊಬ್ಬ ಕೂಲಿಕಾರರು ಈ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಅಕ್ಟೋಬರ್ 30 ರೊಳಗೆ ಪೂರ್ಣಗೊಳಿಸಬೇಕು. ಈ ಗಡುವಿನೊಳಗೆ ಪ್ರಕ್ರಿಯೆ ಮುಗಿಸದಿದ್ದರೆ, ಉದ್ಯೋಗ ಚೀಟಿದಾರರು ಯೋಜನೆಯ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ.
ಇ-ಕೆವೈಸಿ ಪ್ರಕ್ರಿಯೆ ಹೇಗೆ?: ಸರಳ ಕಾಗದಪತ್ರಗಳ ಪರಿಶೀಲನೆ ಬದಲಿಗೆ ಮುಖದ ಗುರುತಿಸುವಿಕೆ ಮೂಲಕ ಮಾಡಲಾಗುತ್ತದೆ. NMMS ಆ್ಯಪ್ ಬಳಕೆ: ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ (NMMS) ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಇ-ಕೆವೈಸಿ ನಡೆಯುತ್ತದೆ. ತಮ್ಮ ಮುಖದ ಗುರುತಿಸುವಿಕೆ (Face Recognition)ಯನ್ನು NMMS ಅಪ್ಲಿಕೇಶನ್ ಮೂಲಕ ಮಾಡಿಸಬೇಕು. ಇದರ ಮೂಲಕ, ಅವರ ಆಧಾರ್ ಸಂಖ್ಯೆ ಮತ್ತು ಇತರ ವಿವರಗಳು ದೃಢೀಕೃತಗೊಳ್ಳುತ್ತವೆ. ಎಲ್ಲಾ ಸಕ್ರಿಯ ನರೇಗಾ ಫಲಾನುಭವಿಗಳು ತಮ್ಮ ಹತ್ತಿರದ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿನ ಸಿಬ್ಬಂದಿಯ ಸಹಾಯದೊಂದಿಗೆ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸಿಕೊಳ್ಳುವಂತೆ ಬಂಟ್ವಾಳ ತಾಲೂಕು ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.