ಬಂಟ್ವಾಳ: ಬೋಳಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಜರುಗಿತು. ಎಸ್ಟಿಎಂಸಿ ಅಧ್ಯಕ್ಷರಾದ ಉಷಾ ಎಸ್ ರಾಜ್ ಧ್ವಜಾರೋಹಣ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ದಿನೇಶ್ ಕಾಮತ್ ಮಾತನಾಡಿ, ಶುಭ ಹಾರೈಸಿದರು. ಉದ್ಯಮಿ ಎಂಎ.ನ್ .ಕುಮಾರ್ ಮೆಲ್ಕಾರ್, ಪತ್ರಕರ್ತ ಸಲೀಂ ಬೋಳಂಗಡಿ ಮಾತನಾಡಿದರು. ಮೆಲ್ಕಾರ್ ಯುವ ಸಂಗಮದ ಅಧ್ಯಕ್ಷ ಪೂರ್ಣೇಶ್ ಆಚಾರ್ಯ, ಸ್ಥಳೀಯ ಸಮಾಜ ಸೇವಕ ಮುಕ್ತಾರ್ ಅಹಮದ್, ಶಿಕ್ಷಕಿ ಸುನಿತಾ ಚಿದಾನಂದ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದೇವದಾಸ್ ಶೆಟ್ಟಿಗಾರ್, ಕ್ರಷ್ಣ ನಾಯಕ್ ಶುಭ ಹಾರೈಸಿದರು. ಈ ಸಂದರ್ಭ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಇವರು ಗಣಕಯಂತ್ರ ಹಾಗೂ ಎಲ್ ಇಡಿ ಟಿವಿ ಯನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.
ಅಮ್ಮ ಬೇಕರಿ ಮಾಲಕ ಜನಾರ್ಧನ್, ಸ್ಥಳೀಯ ಉದ್ಯಮಿ ಮೊಹಮ್ಮದ್ ಬೋಳಂಗಡಿ, ಶಿವಾನಂದ ಸೇನೆರೆಬೈಲು, ಎಸ್ ಡಿ ಎಂ ಸಿ ಸದಸ್ಯ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹಾರಿಸ್ ಆಚಿ, ಸಂಘದ ಪ್ರಧಾನ ಕಾರ್ಯದರ್ಶಿ, ಸುಧಾಕರ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ರಾಜೇಶ್ ವೈಎನ್ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಚಿತ್ರಲೇಖ ಕಾರ್ಯಕ್ರಮ ನಿರೂಪಿಸಿದರೆ ವಿನಯ ಕುಮಾರಿ ಧನ್ಯವಾದವಿತ್ತರು.ಸಹ ಶಿಕ್ಷಕಿ ಅಸ್ಮತ್ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆಗೈದರು.