80ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗೊಳ್ತಮಜಲು ಗ್ರಾಮ ಸಮಿತಿಯ ವತಿಯಿಂದ ದ್ವಜಾರೋಹಣ ಕಾರ್ಯಕ್ರಮ ಕಲ್ಲಡ್ಕ ಜಂಕ್ಷನ್ ನಲ್ಲಿ ನಡೆಯಿತು.
ಗ್ರಾಮ ಸಮಿತಿ ಅಧ್ಯಕ್ಷರಾದ ಜವಾಝ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು, ಕಲ್ಲಡ್ಕ ಬ್ಲಾಕ್ ಸಮಿತಿ ಅಧ್ಯಕ್ಷರಾದ ಸತ್ತಾರ್ ಕಲ್ಲಡ್ಕ ದ್ವಜಾರೋಹಣಗೈದರು,
ಬ್ಲಾಕ್ ಸಮಿತಿ ಜೊತೆ ಕಾರ್ಯದರ್ಶಿಗಳಾದ ಹಮೀದ್ ಅಲೀ ಸ್ವಾತಂತ್ರ್ಯ ದಿನ ಸಂದೇಶ ನೀಡಿದರು, ಮುಖ್ಯ ಅತಿಥಿಗಳಾಗಿ ಬಂಟ್ವಳ ಕ್ಷೇತ್ರ ಸಮಿತಿ ಕೋಶಾಧಿಕಾರಿಗಳಾದ ಯಾಸಿರ್ ಕಲ್ಲಡ್ಕ, ಗೊಳ್ತಮಜಲು ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರುಗಳಾದ ಯೂಸುಫ್ ಹೈದರ್, ಹಾರಿಸ್ ಅಮರ್, ಗ್ರಾಮ ಸಮಿತಿ ಕಾರ್ಯದರ್ಶಿಗಳಾದ ಇಸಾಕ್ ಗೊಳ್ತಮಜಲು ಮೊದಲಾದವರು ಉಪಸ್ಥಿತರಿದ್ದರು. ಮನ್ಸೂರ್ ಕಲ್ಲಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.