
ರಂಗಭೂಮಿ ನಟ, ನಿರ್ದೇಶಕ, ಚಲನಚಿತ್ರ ಕಲಾವಿದ ಹುಬ್ಬಳ್ಳಿ ಮೂಲದ ಯಶವಂತ ಸರದೇಶಪಾಂಡೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಯಶವಂತ ಸರದೇಶಪಾಂಡೆ ಅವರಿಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತ ಉಂಟಾಯಿತು. ಅವರನ್ನು ಫೋರ್ಟಿಸ್ ಆಸ್ಪತ್ರೆ ದಾಖಲು ಮಾಡಲಾಯಿತು. ಅವರ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಅವರು ಪಾತ್ರವಹಿಸುತ್ತಿದ್ದರು. ‘ರಾಮ ಶ್ಯಾಮ ಭಾಮ’ ಕನ್ನಡ ಚಲನಚಿತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಇವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆ
ಕೊಳಲು ನಾಟಕದಲ್ಲಿ ಅಭಿನಯಿಸಬೇಕಿತ್ತು!!!
ಯಶವಂತ ಸರದೇಶಪಾಂಡೆ ಅವರು ನಿನ್ನೆ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಇದು.
ಪ್ರದರ್ಶನ ದಿನಾಂಕ : 18/10/2025, ಶನಿವಾರ ಸಂಜಿ 6:30, ಬೆಂಗಳೂರಿನ ಏನ್ ಅರ ಕಾಲೋನಿ ಸ್ಥಿತ ಡಾ ಸಿ ಅಶ್ವಥ್ ಕಲಾಮಂದಿರದಾಗ !! ಪ್ರವೇಶ ಪಾತ್ರಗಳು ಬುಕ್ ಮೈ ಷೋ ದಾಗ ಲಭ್ಯ !! ಬರಬೇಕರೀ ಎಲ್ಲಾರೂ…


Be the first to comment on "ಆಲ್ ದಿ ಬೆಸ್ಟ್ ಖ್ಯಾತಿಯ ನಟ ಯಶವಂತ ಸರದೇಶಪಾಂಡೆ ಇನ್ನಿಲ್ಲ"