

ಸಿದ್ದಕಟ್ಟೆ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಹಾಗೂ ಪದವಿ ಪೂರ್ವ ಕಾಲೇಜ್ ನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸತತವಾಗಿ 33 ವರ್ಷಗಳ ಕರ್ತವ್ಯ ಸೇವೆ ಸಲ್ಲಿಸಿ ಪದ್ದೋನ್ನತಿಗೊಂಡು ಪ್ರಾಂಶುಪಾಲರಾಗಿ ಹೊಸನಗರ ಸರಕಾರಿ ಪದವಿ ಪೂರ್ವ ಕಾಲೇಜಿಗೆ ನಿಯುಕ್ತಿಗೊಂಡ ಶ್ರೀನಿವಾಸ ನಾಯ್ಕ ರವರನ್ನು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ವತಿಯಿಂದ ಅಧ್ಯಕ್ಷರಾದ ಪ್ರಭಾಕರ ಪ್ರಭು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸಂದೇಶ ಶೆಟ್ಟಿ, ನಿರ್ದೇಶಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ,ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ , ವೀರಪ್ಪ ಪರವ, ಜಾರಪ್ಪ ನಾಯ್ಕ, ಶಿವ ಗೌಡ, ವಿಶ್ವನಾಥ ಶೆಟ್ಟಿಗಾರ್, ಮಂದರಾತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ , ನವೀನ್ ಹೆಗ್ಡೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು


Be the first to comment on "ಸಿದ್ದಕಟ್ಟೆ: ಪದೋನ್ನತಿಗೊಂಡ ಪ್ರಿನ್ಸಿಪಾಲ್ ಶ್ರೀನಿವಾಸ ನಾಯ್ಕರಿಗೆ ಸಹಕಾರಿ ವಲಯದಿಂದ ಅಭಿನಂದನೆ"