ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ 24ನೇ ವರ್ಷದ ನವದಂಪತಿ ಸಮಾವೇಶ ನಡೆಯಿತು. ಹಿರಿಯ ದಂಪತಿ ಹಿಂದು ಜಾಗರಣ ವೇದಿಕೆಯ ಸುಳ್ಯ ಪ್ರಖಂಡದ ತಾಲೂಕು ಸಂಚಾಲಕ ಎನ್. ಎ ರಾಮಚಂದ್ರ ಮತ್ತು ಡಾ, ಯಶೋಧಾ ಕಾರ್ಯಕ್ರಮ ಉದ್ಘಾಟಿಸಿದರು.

ಮುಖಂಡರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹಿಂದು ಸಮಾಜ ಉಳಿದಿರುವುದು ಪರಸ್ಪರ ತಿಳುವಳಿಕೆಯಿಂದ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ದಂಪತಿಗಳಲ್ಲಿ ತಾಳ್ಮೆ, ಹೊಂದಾಣಿಕೆ, ಪರಸ್ಪರ ಅರ್ಥೈಸಿಕೊಳ್ಳುವುದು ತುಂಬಾ ಅಗತ್ಯವೆಂದರು. ಕುಟುಂಬ ಪ್ರಭೋಧನ ಪ್ರಮುಖರಾದ ಗಜಾನನ ಪೈ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಡಾ. ಕಮಲಾ ಪ್ರ. ಭಟ್ ಕಲ್ಲಡ್ಕ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ಒಟ್ಟು ೯೭ ಜೋಡಿ ದಂಪತಿ ಭಾಗವಹಿಸಿದ್ದರು. ಲಾವಣ್ಯ ಸ್ವಾಗತಿಸಿದರು. ಗಾಯತ್ರಿ ಪ್ರಾರ್ಥಿಸಿದರು., ಗುರುಪ್ರಿಯ ವೈಯಕ್ತಿಕ ಗೀತೆ ಹಾಡಿದರು. ಮೇಘಶ್ರೀ ವಂದಿಸಿದರು. ಚೈತ್ರಾ ನಿರೂಪಿಸಿದರು.



Be the first to comment on "Kalladka: ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ 24ನೇ ವರ್ಷದ ನವದಂಪತಿ ಸಮಾವೇಶ"