
ಕರ್ನಾಟಕದ ಐತಿಹಾಸಿಕ ಹಾಗೂ ಹಿಂದೂ ಭಗವತ್ ಭಕ್ತರ ಪವಿತ್ರ ದೇವಸ್ಥಾನ ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಷಡ್ಯಂತ್ರ ಹಾಗೂ ಧರ್ಮಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮೇಲಿನ ಆರೋಪಗಳ ವಿರುದ್ಧ ಸತ್ಯಾಸತ್ಯತೆಗಾಗಿ ಮತ್ತು ಪ್ರಕರಣಕ್ಕೆ ಅಂತ್ಯ ಹಾಡುವ ಸಲುವಾಗಿ ಕರಾವಳಿ ಜೆಲ್ಲೆಗಳ ಎಲ್ಲಾ ಸಹಕಾರಿಗಳ ಒಗ್ಗೂಡೂವಿಕೆಯಿಂದ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ನಾಳೆ ಮಧ್ಯಾಹ್ನ ಧರ್ಮಸ್ಥಳದಲ್ಲಿ ನಡೆಯಲಿರುವ ಸಹಕಾರಿಗಳ ಧರ್ಮ ಜಾಗೃತಿ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ದ. ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಚ್. ಪ್ರಭಾಕರ, ಬೆಳ್ತಂಗಡಿ ಇವರು ಪತ್ರಿಕಾ ಹೇಳಿಕೆ ಮೂಲಕ ಸಹಕಾರಿ ಗಳನ್ನು ವಿನಂತಿ ಮಾಡಿದ್ದಾರೆ.
ಕರಾವಳಿ ಜೆಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸ್ವಂತ ಕಟ್ಟಡ ಇಲ್ಲದ ಹಾಲು ಉತ್ಪಾದಕ ಸಹಕಾರ ಸಂಘಗಳು ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಇಟ್ಟಾಗ ಧರ್ಮಸ್ಥಳದಿಂದ ಆರ್ಥಿಕ ನೇರವು ನೀಡಿರುವುದಲ್ಲದೇ ಬೆಳ್ತಂಗಡಿ ತಾಲೂಕುನಲ್ಲಿ ಸ್ವಸಹಾಯ ಗುಂಪು ಗಳ ಮೂಲಕ ಹೈನುಗಾರಿಕೆಗೆ ಹೆಚ್ಚಿನ ಸಹಕಾರ ಮಾಡಿರುವುದರಿಂದ ಬೆಳ್ತಂಗಡಿ ತಾಲೂಕು ಅತೀ ಹೆಚ್ಚು ಹಾಲು ಉತ್ಪಾದಿಸುವ ತಾಲೂಕಾಗಿ ಒಕ್ಕೂಟದಲ್ಲಿ ಹೆಸರು ಗಳಿಸಲು ಸಾಧ್ಯವಾಗಿದೆ. ಹಿಂದೂ ಧಾರ್ಮಿಕತೆಗೆ ಸಹಕಾರ ಮತ್ತು ಭಜನೆ ಕಮ್ಮಟಗಳನ್ನು ಏರ್ಪಡೂ ಮಾಡುವ ಮೂಲಕ ಕರವಾಳಿಯಲ್ಲಿ ಕುಣಿತ ಭಜನೆಯ ಪ್ರಾರಂಭಕ್ಕೆ ಚಾಲನೆ ನೀಡಿದ ಕೀರ್ತಿ ಧರ್ಮಸ್ಥಳ ಕ್ಷೆತ್ರಕ್ಕೆ ಸಲ್ಲುತ್ತದೆ.ಈ ನಿಟ್ಟಿನಲ್ಲಿ ಕ್ಷೆತ್ರದ ಪಾವಿತ್ರತೆ ಕಾಪಾಡುವಸಲುವಾಗಿ ನಾವೆಲ್ಲರೂ ಧರ್ಮಸ್ಥಳದ ಧ್ವನಿಯಾಗಿ ಯಾತ್ರೆಯಲ್ಲಿ ಭಾಗವಹಿಸೋಣ ಎಂದೂ ಅವರು ವಿನಂತಿಸಿದ್ದಾರೆ.



Be the first to comment on "ಸಹಕಾರಿಗಳ ಧರ್ಮ ಜಾಗೃತಿ ಯಾತ್ರೆ ಯಶಸ್ವಿಗೆ ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟ ನಿರ್ದೇಶಕ ಎಚ್. ಪ್ರಭಾಕರ ಮನವಿ "