ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ 14 ವರ್ಷದೊಳಗಿನ ವಯೋಮಿತಿಯ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟ ಮಜಿ ವೀರಕಂಭದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ವಿಟ್ಲ ಆರ್ ಎಂ ಎಸ್ ಎ ವಿಟ್ಲ ತಂಡ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯಿತು. ದ್ವಿತೀಯ ಸ್ಥಾನವನ್ನು ಬಾಲಕರ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಚಿ ಕುಕ್ಕಾಜೆ, ಬಾಲಕಿಯರ ವಿಭಾಗದಲ್ಲಿ ನಾರಾಯಣ ಗುರು ವಸತಿ ಶಾಲೆ ಪುಂಜಾಲಕಟ್ಟೆ ಪಡೆದುಕೊಂಡಿತು

ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಬುಡಾ ಅಧ್ಯಕ್ಷ ಬೇಬಿ ಕುಂದರ್ ಕ್ರೀಡಾಂಗಣವನ್ನು ಉದ್ಘಾಟಿಸಿ ಶಾರೀರಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಕಬಡ್ಡಿ ಪ್ರಮುಖ ಕೊಡುಗೆ ನೀಢುತ್ತದೆ ಎಂದರು.ಅಧ್ಯಕ್ಷತೆಯನ್ನು ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಗೋಳಿಮಾರ್ ವಹಿಸಿದ್ದರು.ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಮಾತನಾಡಿ, ಯುವ ಜನತೆಯು ಹಾದಿ ತಪ್ಪದಿರುವಲ್ಲಿ ಕ್ರೀಡೆಗಳು ಉತ್ತಮ ಅವಕಾಶವನ್ನು ಕಲ್ಪಿಸಿ ಕೊಡುತ್ತವೆ ಎಂದರು.’

ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ರಾಜ್ಯ ಸರಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಬಂಟ್ವಾಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯರಾಮ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜೇಂದ್ರ ರೈ, ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಅಧ್ಯಕ್ಷ ದಿವಾಕರ್ ಶೆಟ್ಟಿ, ರೋಟರಿ ಅಸಿಸ್ಟೆಂಟ್ ಗವರ್ನರ್ ಪದ್ಮನಾಭ ರೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ, ವಿಟ್ಲ ಟೌನ್ ಪಂಚಾಯತ್ ಸದಸ್ಯ ರವೀಶ್ ವಿಟ್ಲ, ಪ್ರಮುಖರಾದ ಸಂತೋಷ್ ಕುಮಾರ್ ಶೆಟ್ಟಿ ಪೆಲತಡ್ಕ , ರಾಜೇಂದ್ರ ಹೊಳ್ಳ, ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ, ಜಯಪ್ರಕಾಶ್ ತೆಕ್ಕಿಪಾಪು, ಜಯರಾಮ ರೈ ಕಲ್ಲಡ್ಕ, ಚಂದ್ರಶೇಖರ್, ಪಂಚಾಯತ್ ಸದಸ್ಯ ಸಂದೀಪ್ ಕೆಲಿಂಜ, ಮಾತೃಶ್ರೀ ಗೆಳೆಯ ಬಳಗದ ಅಧ್ಯಕ್ಷ ರಮೇಶ್ ಗೌಡ ಮೈರಾ, ಪ್ರಕಾಶ್ ಬೆತ್ತಸರವು, ಲಯನ್ಸ್ ಕ್ಲಬ್ ಅಮ್ಟೂರು ಅಧ್ಯಕ್ಷ ಇಲಿಯಾಸ್ ಡಿಸೋಜಾ, 2025 26 ನೇ ಸಾಲಿನ ಬಂಟ್ವಾಳ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಜಗದೀಶ ರೈ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜ್ಯೋತಿ, ಚಂದ್ರಶೇಖರ್, ಸುಧಾಕರ, ತುಂಬೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಬಾಬು ಮಾಸ್ಟರ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್ ವಿ, ಮಂಚಿ ವಲಯದ ನೂಡಲ್ ಶಿಕ್ಷಕರಾದ ರಫಿ ಮತ್ತು ರಾಘವೇಂದ್ರ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ವಚನ್ ಶೆಟ್ಟಿ,ಹಾಗೂ ಪದಾಧಿಕಾರಿಗಳು , ಪತ್ರಕರ್ತ ಸಂದೀಪ್ ಸಾಲಿಯನ್, ಪ್ರದೀಪ್ ಪೂಜಾರಿ, ಕಲ್ಲಡ್ಕ ವಲಯ ನೋಡಲ್ ಅಧಿಕಾರಿಯಾದ ಜಗದೀಶ್, ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಅಖಿಲ್ ಶೆಟ್ಟಿ ಸರಪಾಡಿ, ಜಗದೀಶ್ ರೈ ತುಂಬೆ, ಚಿನ್ನಪ್ಪ ನಾವೂರು, ಸುರೇಶ್ ಶೆಟ್ಟಿ, ಚಂದಳಿಕೆ, ಜನಾರ್ದನ ಕೊಯಿಲ, ವಿನೋದಕುಮಾರಿ ಮಂಚಿ ಕುಕ್ಕಜೆ ಉಪಸ್ಥಿತರಿದ್ದರು.ಮಜಿ ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು, ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಹಾಗೂ ಅನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಗಣೇಶ್ ಕೊಡಿ, ಮೋನಪ್ಪ ಗಣೇಶ್ ಕೊಡಿ, ರತನ್ ಆಳ್ವ, ಶಾಲಾ ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಸಹಕರಿಸಿದರು.



Be the first to comment on "ಮಜಿ ವೀರಕಂಭ ಶಾಲೆಯಲ್ಲಿ ತಾಲೂಕು ಮಟ್ಟಡ ಕಬಡ್ಡಿ ಪಂದ್ಯಾಟ"