
ಕಲ್ಲಡ್ಕದಲ್ಲಿ ಸೆ.28ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ 48ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶಾಂತಶ್ರೀ ಪ್ರಶಸ್ತಿಯನ್ನು ಭರತನಾಟ್ಯ ಕಲಾವಿದೆ, ನೃತ್ಯಗುರು ವಿದುಷಿ ವಿದ್ಯಾ ಮನೋಜ್ (VIDYA MANOJ) ಅವರಿಗೆ ನೀಡಿ ಗೌರವಿಸಲಾಗುವುದು. ಶಾರದಾ ಸೇವಾ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮಗಳು ನಡೆಯಲಿದೆ.

ಐದು ದಿನಗಳ ಈ ಕಾರ್ಯಕ್ರಮದಲ್ಲಿ ಸೆ.28ರಂದು ಮಾರ್ನೆಮಿದ ಗೊಬ್ಬು ಕ್ರೀಡಾಕೂಟ, ಸೆ.29ರಂದು ವೇ.ಮೂ.ಪಳನೀರು ಶ್ರೀಪತಿ ಭಟ್ ಅವರಿಂದ ಶಾರದಾಮಾತೆ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಕ್ರಮ ಹಾಗೂ ಸಭೆ ನಡೆಯಲಿದ್ದು, ಅಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭ 44 ವರ್ಷಗಳ ಶಬರಿಮಲೆ ಯಾತ್ರೆ ಕೈಗೊಂಡ ಕಮಲ ಗುರುಸ್ವಾಮಿ ಕುಂಟಿಪಾಪು ಮತ್ತು ಸ್ವೋದ್ಯೋಗದಲ್ಲಿ ಸಾಧಕಿಯಾದ ನಾಗರತ್ನ ಪೂರ್ಲಿಪ್ಪಾಡಿ ಅವರಿಗೆ ಗ್ರಾಮಗೌರವ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನೀಡಲಾಗುವುದು. ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಹಲಿದ್ದು, ವಿಜಯದಶಮಿಯಂತು ಶೋಭಾಯಾತ್ರೆಯೊಂದಿಗೆ ಉತ್ಸವ ಸಮಾಪನಗೊಳ್ಳಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಅಲ್ಲದೆ ಪುದರ್ ದೀತಿಜಿ, ಕಥೆ ಎಡ್ಡೆಂಡು ನಾಟಕ, ನೃತ್ಯರಂಜನಿ, ಗಾನ ನಾಟ್ಯ ಸಂಭ್ರಮ ಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ವಿಜಯದಶಮಿಯಂದು ವಿಜ್ರಂಭಣೆಯ ಶೋಭಾಯಾತ್ರೆ ಯೊಂದಿಗೆ ಉತ್ಸವವು ಸಮಾಪನಗೊಳ್ಳಲಿದೆ ಎಂದು KALLADKA SHARADA SEVA PRATISTANA ಪ್ರತಿಷ್ಠಾನದ ಅಧ್ಯಕ್ಷ ಯತೀನ್ ಕುಮಾರ್ ಹಾಗೂ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ, SHARADA POOJA UTSAVA SAMITI KALLADKA ಶಾರದಾ ಪೂಜಾ ಉತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಪೂಜಾರಿ ಕಲ್ಲಡ್ಕ ಹಾಗೂ ಕಾರ್ಯದರ್ಶಿ ಪ್ರಮಿತ್ ಶೆಟ್ಟಿ ಕುಕ್ಕಮಜಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲ್ಲಡ್ಕ ಶಾರದೋತ್ಸವದ ವಿವರಗಳು ಇಲ್ಲಿವೆ






Be the first to comment on "Kalladka: ಶಾಂತಶ್ರೀ ಪ್ರಶಸ್ತಿಗೆ ವಿದುಷಿ ವಿದ್ಯಾ ಮನೋಜ್ ಆಯ್ಕೆ – ಕಲ್ಲಡ್ಕ ಶಾರದೋತ್ಸವದ ವಿವರಗಳು ಇಲ್ಲಿವೆ"