ಬಂಟ್ವಾಳ ತಾಲೂಕಿನ ಶ್ರೀ ಲಕ್ಷ್ಮೀನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘದ ನಿ. ವತಿಯಿಂದ ದಶಮ ಸಂಭ್ರಮ ಕಾರ್ಯಕ್ರಮ ಭಾನುವಾರ ಸೆ.14ರಂದು ಮಂಚಿಕಟ್ಟೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕೈಯೂರು ನಾರಾಯಣ ಭಟ್ ತಿಳಿಸಿದ್ದಾರೆ.

ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದು, ಆಶೀರ್ವಚನ ನೀಡುವರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ದೀಪೋಜ್ವಲನ ಮಾಡುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೈಯುರು ನಾರಾಯಣ ಭಟ್ ವಹಿಸುವರು. ದಶಮ ಸಂಭ್ರಮದ ವಿಶೇಷ ಠೇವಣಿಪತ್ರವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಬಿಡುಗಡೆ ಮಾಡುವರು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹಕಾರಿ ಅಭಿವೃದ್ಧಿ ಅಧಿಕಾರಿ ಡಾ. ಜ್ಯೋತಿ ಡಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ಎನ್.ಜೆ.ಗೋಪಾಲ್ ಮುಖ್ಯ ಅತಿತಿಗಳಾಗಿ, ಕುಕ್ಕಾಜೆಯ ವ್ಯಾಪಾರಸ್ಥರಾದ ಜೆಫ್ರಿ ಲೂಯಿಸ್, ಅಬ್ದುಲ್ ರಹಿಮಾನ್ ಎ.ಕೆ.ಕುಕ್ಕಾಜೆ, ಪ್ರಗತಿಪರ ಕೃಷಿಕ ರಾಮಕೃಷ್ನ ನಾಯಕ್ ಕೋಕಳ ಗೌರವ ಉಪಸ್ಥಿತರಿರುವರು. ಸ್ಥಳೀಯ ಸಂಘ, ಸಂಸ್ಥೆಗಳಿಗೆ ಆರ್ಥಿಕ ಸಹಕಾರ ನೀಡಲಾಗುವುದು. ಇದೇ ವೇಳೆ ಬೋಳಂತೂರು ಶ್ರೀ ಶಾರದಾಂಬಾ ಮಹಿಳಾ ಯಕ್ಷ ಕಲಾ ಸಂಘದಿಂದ ಬಯಲಾಟ ಶಾಂಭವಿ ವಿಜಯ ನಡೆಯಲಿದೆ ಎಂದವರು ಮಾಹಿತಿ ನೀಡಿದ್ದಾರೆ.



Be the first to comment on "14ರಂದು ಶ್ರೀ ಲಕ್ಷ್ಮೀನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘದ ದಶಮ ಸಂಭ್ರಮ"