
‘ವಿದ್ಯೆಯಿಂದ ಸ್ವತಂತ್ರರಾಗಿ’ ಎಂಬ ಮಾತಿನ ವ್ಯಾಪ್ತಿಯನ್ನು ಹಿಗ್ಗಿಸಬೇಕಾಗಿದೆ. ‘ವಿದ್ಯೆಯಿಂದ ಸ್ವತಂತ್ರರಾಗಿ’ ಎಂದರೆ ಇಂದು ‘ಶಿಕ್ಷಣ’ ಮತ್ತು ‘ಉದ್ಯೋಗ’ ಎಂಬ ಸೀಮಿತ ಅರ್ಥವಲ್ಲ. ಮಾರುಕಟ್ಟೆ ಜಗತ್ತು ಎಲ್ಲವನ್ನು ನಿಯಂತ್ರಿಸುತ್ತಿವೆ. ಮನಸ್ಸು ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಒದ್ದಾಡುತ್ತಿವೆ. ಸ್ವತಂತ್ರ ಆಯೋಚನೆಗಳು ಮಾತ್ರ ನಮ್ಮನ್ನು ಕಾಪಾಡಬಹುದು. ಪಕ್ಷಪಾತಿಗಳ ದಾಸರಾಗದಂತೆ ತಡೆಯಬಹುದು. ಗುರುಗಳ ಸಂದೇಶ ಬೆಳಕಿನಲ್ಲಿ ವರ್ತಮಾನದ ಬಹು ಬಗೆಯ ಕತ್ತಲೆಯಿಂದ ಪಾರಾಗಬಹುದು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ ತಿಳಿಸಿದರು
ಅವರು ಯುವವಾಹಿನಿ ಬಂಟ್ವಾಳ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 171 ನೇ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ಗುರುಪೂಜೆಯಲ್ಲಿ ಗುರುಸಂದೇಶ ನೀಡಿದರು

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಯುವವಾಹಿನಿ ಬಂಟ್ವಾಳ ಘಟಕದ ಕೋಶಾಧಿಕಾರಿ ನವೀನ್ ಪೂಜಾರಿ, ಸಲಹೆಗಾರ ಟಿ ರಾಮಚಂದ್ರ ಸುವರ್ಣ ತುಂಬೆ, ಮಾಜಿ ಅಧ್ಯಕ್ಷರಾದ ಹರೀಶ್ ಎಸ್ ಕೋಟ್ಯಾನ್, ನಾಗೇಶ್ ಪೊನ್ನೋಡಿ, ದಿನೇಶ್ ಸುವರ್ಣ ರಾಯಿ ಉಪಸ್ಥಿತರಿದ್ದರು ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ಧನ್ಯವಾದ ನೀಡಿದರು


Be the first to comment on "Bantwal: ವರ್ತಮಾನದ ಕತ್ತಲೆಯಿಂದ ಪಾರಾಗಲು ಗುರುಗಳ ಸಂದೇಶ ಸಹಕಾರಿ: ಪ್ರೇಮನಾಥ್ ಕೆ."