
ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ನಾಗರಾಜ್ ಕೆ.ಎಲ್, ಕಾರ್ಯದರ್ಶಿಯಾಗಿ ಯಾದವ ಕುಲಾಲ್ ಅಗ್ರಬೈಲ್ ಆಯ್ಕೆಯಾಗಿದ್ದಾರೆ ವಿವರಗಳು ಇಲ್ಲಿವೆ

ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಇದರ ಮಹಾಸಭೆಯು ಆದಿತ್ಯವಾರ ಬಿ.ಸಿ.ರೋಡಿನ ಹೊಟೇಲ್ ಸತ್ಯನಾರಾಯಣ ಲಂಚ್ ಹೋಂನಲ್ಲಿ ನಿಕಟಪೂರ್ವಾಧ್ಯಕ್ಷ ಈಶ್ವರ ಕುಮಾರ್ ಭಟ್ ಅಧ್ಯಕ್ಷತೆ ವಹಿಸಿದ್ದರು.


ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಚ್. ಕುದ್ಯಾಡಿ ಸ್ವಾಗತಿಸಿದರು. ಮಿಥುನ್ ಮೊಗರ್ನಾಡು ಪ್ರಾರ್ಥನೆ ಹಾಡಿದರು. ಕೋಶಾಧಿಕಾರಿ ಯಾದವ ಅಗ್ರಬೈಲು ಲೆಕ್ಕಪತ್ರ ಮಂಡಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ : ನಂತರ ನಡೆದ ನೂತನ ಪಧಾಧಿಕಾರಿಗಳ ಆಯ್ಕೆಯಲ್ಲಿ 2025-27ನೇ ಸಾಲಿನ ಅಧ್ಯಕ್ಷರಾಗಿ ನಾಗಾರಾಜ್ ಕೆ.ಎಲ್., ಉಪಾಧ್ಯಕ್ಷರಾಗಿ ಕೆ. ರಘುವೀರ್ ಕಾಮತ್, ಪಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಯಾದವ ಕುಲಾಲ್ ಅಗ್ರಬೈಲು, ಕೋಶಾಧಿಕಾರಿಯಾಗಿ ಲಾವಣ್ಯ ಸುರೇಶ್ ಜ್ಯೋತಿಗುಡ್ಡೆ, ಜತೆಕಾರ್ಯದರ್ಶಿಗಳಾಗಿ ಮಿಥುನ್ ಎ.ಎಸ್. ಮತ್ತು ದಿನೇಶ್ ತುಂಬೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಈಶ್ವರ ಕುಮಾರ್ ಭಟ್, ಸಚ್ಚಿದಾನಂದ ಪ್ರಭು, ರಮೇಶ್, ಮುಸ್ತಾಫ, ವೆಂಕಟ್ರಮಣ ಕಲ್ಲಡ್ಕ, ಮಾದವ ದರಿಬಾಗಿಲು ಆಯ್ಕೆಯಾಗಿದ್ದಾರೆ.


Be the first to comment on "ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ನಾಗರಾಜ್ ಕೆ.ಎಲ್, ಕಾರ್ಯದರ್ಶಿಯಾಗಿ ಯಾದವ ಕುಲಾಲ್ ಅಗ್ರಬೈಲ್… ವಿವರಗಳು ಇಲ್ಲಿವೆ"