ಒಗ್ಗಟ್ಟಿನಿಂದ ಮಾತ್ರ ಮುಂದಿನ ಪೀಳಿಗೆಯವರಿಗೆ ಸಮಾಜದಲ್ಲಿ ಯಾವುದಾದರೊಂದು ಕೊಡುಗೆ ನೀಡಲು ಸಾಧ್ಯ. ಎಲ್ಲಾ ವಯೋಮಾನದವರೂ ಸಮಾಜ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು. ಬಡವರಿಗೆ ಸಹಾಯ ಮಾಡಬೇಕು ಎಂದು ಬೆಂಗಳೂರು ಕುಲಾಲ ಸೇವಾ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ ತಿಳಿಸಿದರು.

ಅವರು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ನಡೆದ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ-ಸೀಸನ್ ೩ರಲ್ಲಿ ನಡೆದ ಸಮಾರಂಭದಲ್ಲಿ ‘ನಮ್ಮೂರ ಟೆಕ್ನೀಶಿಯನ್’ ಟೆಕ್ನೀಶಿಯನ್‌ರವರ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಟೋಲೈನ್ಸ್ ಗ್ಯಾರೇಜಿನ ಮಾಲಕ ಸುಧಾಕರ ಸಾಲ್ಯಾನ್ ಮಾತನಾಡಿ ಗ್ಯಾರೇಜ್ ಕೆಲಸಗಾರರಿಗೆ ವೇದಿಕೆಗಳು ಸಿಗುವುದು ಬಹಳ ಕಡಿಮೆ. ಆದರೆ ನಮ್ಮೂರ ಟೆಕ್ನೀಶಿಯನ್ ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕಿಂತಲೂ ಅಧಿಕ ಟೆಕ್ನೀಶಿಯನ್‌ರವರನ್ನು ಗುರುತಿಸಿ ಸನ್ಮಾನಿಸಿರುವುದು ನಮೆಗೆಲ್ಲ ಹೆಮ್ಮೆಯಾಗಿದೆ. ಟೆಕ್ನೀಶಿಯನ್‌ರವರಿಗೆ ಸನ್ಮಾನ ಕಾರ್ಯಕ್ರಮ ಇದು ರಾಜ್ಯದಲ್ಲೆ ಮೊದನೆಯದಾಗಿರುತ್ತದೆ ಎಂದು ತಿಳಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್ ಮಾತನಾಡಿ ಕೃಷ್ಣ ವೇಷ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ನೂರಾರು ಸ್ಪರ್ಧಾಳುಗಳು ಭಾಗವಹಿಸಿರುವುದು ತುಂಬಾ ಸಂತೋಷವಾಗಿದೆ. ಇದರಿಂದಾಗಿ ಬಾಲ್ಯದಿಂದಲೇ ಮಕ್ಕಳಿಗೆ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ಅವಕಾಶ ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದರು.
ಹಿರಿಯ ಟೆಕ್ನೀಶಿಯನ್ ಮಾಧವ ಕುಲಾಲ್ ಮತ್ತು ಮಹಿಳಾ ಅಟೋ ಚಾಲಕಿ ವನಿತ ಮತ್ತು ಬಂಟ್ವಾಳ ತಾಲೂಕಿನ ನೂರಹದಿನಾರು ಟೆಕ್ನೀಶಿಯನ್‌ರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬೆಂಗಳೂರು ಉದ್ಯಮಿ ಐ. ಉಮೇಶ್ ಬಂಗೇರ, ಜಿಲ್ಲಾ ಗ್ಯಾರೇಜ್ ಸಂಘದ ಅಧ್ಯಕ್ಷ ಪದ್ಮನಾಭ ಕುಲಾಲ್, ನೀಲಪ್ಪ ಸಾಲ್ಯಾನ್, ವಿಜಯ ಕುಲಾಲ್ ಬೆಂಗಳೂರು, ಜಿಲ್ಲಾ ಮಾತೃ ಸಂಘದ ದಳಪತಿ ಪ್ರದೀಪ್ ಅತ್ತಾವರ ಉಪಸ್ಥಿತರಿದ್ದರು. ಸೇವಾದಳದ ಕಾರ್ಯದರ್ಶಿ ರಾಜೇಶ್ ಭಂಡಾರಿಬೆಟ್ಟು ಅತಿಥಿಗಳನ್ನು ಸ್ವಾಗತಿಸಿದರು. ಕವಿತಾ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ದುಗನಕೋಡಿ ಧನ್ಯವಾದ ನೀಡಿದರು.


Be the first to comment on "ನಮ್ಮೂರ ಟೆಕ್ನೀಶಿಯನ್’ — ತಾಲೂಕಿನಲ್ಲಿರುವ ನೂರಕ್ಕಿಂತ ಅಧಿಕ ಟೆಕ್ನೀಶಿಯನ್‌ರವರಿಗೆ ಸನ್ಮಾನ"