ಬಂಟ್ವಾಳ ಪೇಟೆಯಲ್ಲೇ ಸಾಗುವ ಕೊಟ್ರಮಣಗಂಡಿ ರಸ್ತೆಯಲ್ಲೊಂದು ದೊಡ್ಡ ಗುಂಡಿ ಕೆಲ ದಿನಗಳಿಂದ ಕಾಣಿಸುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.


ಬಂಟ್ವಾಳ ಪೇಟೆಯ ಹೃದಯಭಾಗದಿಂದ ಕೊಟ್ರಮಣಗಂಡಿ ರಸ್ತೆ ಹಾಗೆಯೇ ಮುಂದೆ ಸಾಗಿ ಹೆದ್ದಾರಿಯೆಡೆಗೆ ಸಾಗುತ್ತದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಹೊಂಡಗಳಿದ್ದು, ಈ ಜಾಗದಲ್ಲಂತೂ ಹೊಂಡಗಳು ಬೃಹದಾಕಾರವಾಗಿ ಬೆಳೆದಿದೆ. ನಡೆದುಕೊಂಡು ಹೋಗುವವರಿಗೂ ಜಾಗವಿಲ್ಲ, ದ್ವಿಚಕ್ರ ವಾಹನ ಸವಾರರಿಗೂ ಕಷ್ಟ. ವಾಹನಗಳ ಚಕ್ರಗಳು ಹೊಂಡದಲ್ಲಿ ಬಿದ್ದರೆ, ರಿಪೇರಿಗೇ ಹೊಗಬೇಕು ಎನ್ನುವಷ್ಟು ಸಮಸ್ಯೆಯಾಗುತ್ತಿದೆ, ಸಾರ್ವಜನಿಕರು ಇದರಿಂದ ಸಾಕಷ್ಟು ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಪತ್ರಿಕಾ ವಿತರಕ ಭಾಮಿ ಚಿದಾನಂದ ಶೆಣೈ ತಿಳಿಸಿದ್ದಾರೆ. ಸಮಸ್ಯೆ ಕುರಿತು ನಮ್ಮ ಗಮನಕ್ಕೆ ಬಂದಿದ್ದು, ಮಳೆ ನಿಂತ ಕೂಡಲೇ ಇದಕ್ಕೊಂದು ಬಲವಾದ ಪ್ಯಾಚ್ ವರ್ಕ್ ಕಾಮಗಾರಿಯನ್ನು ಮಾಡಲಾಗುವುದು ಎಂದು ಪುರಸಭಾಧ್ಯಕ್ಷ ವಾಸು ಪೂಜಾರಿ ತಿಳಿಸಿದ್ದಾರೆ.


Be the first to comment on "Bantwal: ಬಂಟ್ವಾಳದ ಕೊಟ್ರಮಣಗಂಡಿ ರಸ್ತೆಯಲ್ಲಿ ಗುಂಡಿ"