ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡುತ್ತೀರಾ ಎಂದು ಕೇಳಿ ಬಂಟ್ವಾಳದ ವ್ಯಕ್ತಿಯೊಬ್ಬರಿಗೆ ವಂಚಿಸಿದ ಪ್ರಕರಣವೊಂದು ಮಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದೆ. ಒಟ್ಟು 24,90,000 ರೂಗಳನ್ನು ಅವರು ಕಳೆದುಕೊಂಡಿದ್ದಾರೆ.

ಜುಲೈ 20ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ, ಫೈಪೈಸಾ ಎಂಬ ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡುತ್ತೀರಾ ಎಂದು ಕೇಳಿದ್ದಾನೆ. ಅದಕ್ಕೆ ಒಪ್ಪಿಕೊಂಡಾಗ, ಫೈಪೈಸಾಮಾಕ್ಸ್ ಆಪ್ ಡೌನ್ಲೋಡ್ ಮಾಡಬೇಕು, ಕನಿಷ್ಠ 5 ಸಾವಿರ ರೂ ಹೂಡಿಕೆ ಮಾಡಬೇಕು ಎಂದಿದ್ದಾನೆ. ಅದರಂತೆ ದೂರುದಾರರು 40 ಸಾವಿರ ರೂ ಹಣ ಹಾಕಿ ಖಾತೆ ತೆರೆದಿದ್ದಾರೆ. ಅದರಲ್ಲಿ ಶೇರ್ ಮಾರ್ಕೆಟ್ ಗಾಗಿ ಹಣ ಹೂಡಿಕೆ ಮಾಡಲು ತಿಳಿಸಿದ್ದು, ಖಾತೆ ತೆರೆಯಲು ಹಾಕಿದ ಹಣದಲ್ಲಿ 1 ಸಾವಿರ ರೂ ಹಣವನ್ನು ಹಿಂಪಡೆದಿದ್ದಾರೆ. ನಂತರ ಶೇರ್ ಮಾರುಕಟ್ಟೆಯಲ್ಲಿ ಹಣ ಹೂಡಿಸುವ ಸಲುವಾಗಿ ಹಂತಹಂತವಾಗಿ ಒಟ್ಟು ರೂ.24,90,000 ಹಣವನ್ನು ಹಾಕಿದ್ದಾರೆ. ಹಣವನ್ನು ವಿಥ್ ಡ್ರಾ ಮಾಡಲು ಹೋದಾಗ ಆಗಿರುವುದಿಲ್ಲ. ವಂಚನೆಯನ್ನು ಅರಿತ ದೂರುದಾರರು, ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.


Be the first to comment on "CYBERCRIME NEWS: ಶೇರ್ ಮಾರ್ಕೆಟ್ ಹೂಡಿಕೆ ಮಾಡ್ತೀರಾ…ವಂಚಕರಿದ್ದಾರೆ ಎಚ್ಚರಿಕೆ – 24.9 ಲಕ್ಷ ರೂಗಳನ್ನು ಕಳೆದುಕೊಂಡ ಪ್ರಕರಣವಿದು"