
.
ಬಂಟ್ವಾಳ: ತಾಲೂಕು ಮಟ್ಟದ ಶ್ರೀಕೃಷ್ಣ ಜಯಂತಿ ಆಚರಣೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ನಡೆಯಿತು.
ಅಧ್ಯಕ್ಷತೆಯನ್ನು ಉಪತಹಸೀಲ್ದಾರ್ ದಿವಾಕರ ಮುಗುಳ್ಯ ವಹಿಸಿ, ಶ್ರೀಕೃಷ್ಣ ಸಂದೇಶ ಇಂದಿಗೂ ಪ್ರಸ್ತುತ ಎಂದರು.ಯಾದವ ಸಂಘದ ತಾಲೂಕು ಅಧ್ಯಕ್ಷ ಅಶೋಕ್ ಕುಮಾರ್ ಅಮೈ ಶ್ರೀಕೃಷ್ಣನ ಕುರಿತು ಸಂದೇಶ ನೀಡಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ತಂದೆ, ತಾಯಂದಿರು ಶ್ರೀಕೃಷ್ಣ ಲೀಲೆಗಳ ಪ್ರತಿರೂಪವನ್ನು ಮಕ್ಕಳಲ್ಲಿ ತೋರ್ಪಡಿಸುತ್ತಾರೆ. ಎಲ್ಲಿ ಕೆಟ್ಟ ಕೆಲಸಗಳು ನಡೆಯುತ್ತಿದೆಯೋ ಅಲ್ಲಿ ಧರ್ಮಸಂಸ್ಥಾಪನೆಗೆ ಜನ್ಮತಾಳುತ್ತೇನೆ ಎಂದು ಕೃಷ್ಣ ನೀಡಿದ ಸಂದೇಶ ಉಲ್ಲೇಖಿಸಿದರು.
ಜಿಲ್ಲಾ ಯಾದವ ಸಂಘದ ಕೋಶಾಧಿಕಾರಿ ಚಂದ್ರಶೇಖರ್ ಹಾಗೂ ಮುಖಂಡರಾದ ರಾಜೇಶ್, ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು, ಶಿವಪ್ರಸಾದ್, ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು.


Be the first to comment on "Bantwal: ತಾಲೂಕು ಕಚೇರಿಯಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ"