
ಕಲ್ಲಡ್ಕದ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಘ ಮತ್ತು ಸಂಸ್ಕೃತ ವಿಭಾಗದಿಂದ ಆಯೋಜಿಸಲಾಗಿದ್ದ ರಕ್ಷಾಬಂಧನ ಹಾಗೂ ಸಂಸ್ಕೃತ ದಿನ ಕಾರ್ಯಕ್ರಮ ಸಂಸ್ಥೆಯ ಆಜಾದ್ ಭವನದಲ್ಲಿ ನಡೆಯಿತು. ಈ ಬಾರಿಯ ರಕ್ಷಾಬಂಧನವನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿವರ್ಗದವರೊಂದಿಗೆ ಆಚರಿಸಲಾಯಿತು.

OPTIC WORLD
ಬಾಳ್ತಿಲ ಗ್ರಾಮ ಪಂಚಾಯಿತಿಯ ಸುಂದರ ನಾಯ್ಕ, ಸಂಧ್ಯಾ, ಸುರೇಖಾ, ನಾಗೇಶ್, ಜ್ಯೋತಿ. ಬಿ, ಮಮತಾ ಗೋಳ್ತಮಜಲು ಗ್ರಾಮ ಪಂಚಾಯಿತಿಯಿಂದ ವಿಜಯಶಂಕರ ಆಳ್ವ, ಸುರೇಶ್, ಎಂ, ರೇವತಿ, ಗೀತಾಂಜಲಿ, ವನಿತಾ, ಚೈತ್ರ, ನಿಶ್ಮಿತಾ, ಜಯ ಕೆ, ಹರೀಶ್ ಎನ್ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದರು.

ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯ ಸುಜಿತ್ ಕೊಟ್ಟಾರಿ ಅತಿಥಿಗಳಾಗಿ ಆಗಮಿಸಿ, ರಕ್ಷಾಬಂಧನ ಹಾಗೂ ಸಂಸ್ಕೃತದ ಮಹತ್ವವನ್ನು ತಿಳಿಸಿದರು. ಗೋಳ್ತಮಜಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಅಭ್ಯಾಗತರಾದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ರಕ್ಷೆಯನ್ನು ಕಟ್ಟಿ ಭ್ರಾತೃತ್ವವನ್ನು ಸಾರಿದರು. ಹಾಗೆಯೇ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿಯನ್ನು ಸವಿದರು. ಉಪ ಪ್ರಾಂಶುಪಾಲರಾದ ಯತಿರಾಜ್ ಸ್ವಾಗತಿಸಿದರು. ಅಂತಿಮ ಬಿಸಿಎ ವಿದ್ಯಾರ್ಥಿನಿ ದಿವ್ಯಲಕ್ಷ್ಮೀ ವಂದಿಸಿದರು. ಬಿಕಾಂ ವಿದ್ಯಾರ್ಥಿನಿ ಧನುಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಅಂತಿಮ ಬಿಕಾಂ ವಿದ್ಯಾರ್ಥಿನಿ ಶರಣ್ಯಶ್ರೀ ರಕ್ಷಾಬಂಧನ ಗೀತೆಯನ್ನು ಹಾಡಿದರು.


Be the first to comment on "Kalladka: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಕ್ಷಾಬಂಧನ"