Cyberfraud: ಎಚ್ಚರ!!! ವಾಟ್ಸಾಪ್ ಕೂಡ ಸುರಕ್ಷಿತವಲ್ಲ – ಹಣ ಕೇಳಿದರು ಎಂದು ಕಳಿಸುವ ಮುನ್ನ ಜಾಗ್ರತೆ ವಹಿಸಿ – ಇಲ್ಲಿದೆ ವಿವರ

OPTIC WORLD

ಮಂಗಳೂರು: ನಾವು ಆಪ್ತವಾಗಿ ಹರಟುವ, ಮಾಹಿತಿಗಳನ್ನು ಶೇರ್ ಮಾಡುವ, ಮಹತ್ವದ ಸಂಗತಿಗಳನ್ನೂ ಕಳುಹಿಸುವ ಪ್ರಬಲ ಸಾಮಾಜಿಕ ಜಾಲತಾಣ ವಾಟ್ಸಾಪ್ ಸುರಕ್ಷಿತವಾಗಿಲ್ಲ. ಅದೇ ನಂಬರ್ ಅನ್ನು ಯಾರೂ ಕಬ್ಜಾ ಮಾಡಿಕೊಂಡು ನಿಮ್ಮ ಸ್ನೇಹಿತರಿಗೆ, ಕಾಂಟಾಕ್ಟ್ ಗಳಿಗೆ ಮೆಸೇಜ್ ಕಳುಹಿಸುವುದಲ್ಲದೆ, ಹಣ ಕೂಡ ಕೇಳಬಹುದು…ಮಂಗಳವಾರ ಮೂರು ತಾಜಾ ಪ್ರಕರಣಗಳು ವರದಿಯಾಗಿದ್ದು, ವಿವರ ಇಲ್ಲಿದೆ.

ಜಾಹೀರಾತು
  • ಇಂತಹಾ ಕರೆಗಳು ಬಂದಲ್ಲಿ ತಕ್ಷಣ 1930 ನಂಬರ್ ಗೆ ಕರೆ ಮಾಡಿ ದೂರು ದಾಖಲಿಸಿ..

ಡಿಜಿಟಲ್ ಜಗತ್ತಿನ ಕತ್ತಲ ಸಾಮ್ರಾಜ್ಯದ ದುಷ್ಟರು, ಸೈಬರ್ ಖದೀಮರು  ವಾಟ್ಸಾಪ್ ಅನ್ನೇ ಅಸ್ತ್ರವಾಗಿಸಿಕೊಂಡು, ಖಾತೆಯನ್ನೇ ಹೈಜಾಕ್ ಮಾಡಿ, ಸ್ನೇಹಿತರು ಮತ್ತು ಕುಟುಂಬಸ್ಥರನ್ನೇ ಲೂಟಿ ಮಾಡುವ ಕೃತ್ಯಕ್ಕೆ ಹೊರಟಿದ್ದಾರೆ. ಇವತ್ತು ಇವರದ್ದು, ನಾಳೆ ಅವರದ್ದು, ನಾಡಿದ್ದು ನಮ್ಮ ನಂಬರ್ ಕೂಡ ಹೀಗೆ ಕಬ್ಜಾ ಆಗಬಹುದು.

ಪುತ್ತೂರಿನಲ್ಲಿ ಕೆಲಸ ಮಾಡುವ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು, ಹಣಕಾಸಿಗೆ ಸಂಬಂಧಿಸಿದಂತೆಯೇ ಹೆಚ್ಚು ಕೆಲಸ ಮಾಡುವ ಹಿನ್ನೆಲೆಯಲ್ಲಿ ಅವರು ಹಣ ಕೇಳುವುದು ಹೊಸತೇನಲ್ಲ. ಹಾಗೆಯೇ ಅವರ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವ ಅನೇಕ ಮಂದಿಗೆ ಬೆಳಗ್ಗೆ ಸುಮಾರು 11ರಿಂದ 12ರ ಅವಧಿಯಲ್ಲಿ ಮೆಸೇಜ್ ಒಂದು ಬಂದಿದೆ.

60000 urgent need

My UPI not working

Return money 2hours

Phonepe Googlepay  *****9241745226 Avinash Kumar

ವಾಟ್ಸಾಪ್ ನಲ್ಲಿ ಈ ಮೆಸೇಜ್ ಸ್ನೇಹಿತರಿಗೆ ಬಂದಾಗ, ಏನಾಯಿತು ಇವರಿಗೆ ಎಂದು ಕರೆ ಮಾಡಲು ಹೊರಟರೆ, ಮೊಬೈಲ್ ಸ್ವಿಚ್ ಆಫ್. ಅವರ ಯುಪಿಐ ವರ್ಕ್ ಆಗ್ತಾ ಇಲ್ಲ, ಸ್ನೇಹಿತರ ನಂಬರ್ ಒಂದನ್ನು ಕೊಟ್ಟಿದ್ದಾರೆ, ಅವರಿಗಾದರು ಕರೆ ಮಾಡೋಣವೆಂದರೆ ಆ ನಿಗೂಢ ವ್ಯಕ್ತಿ ಸೋ ಕಾಲ್ಡ್ ಅವಿನಾಶ್ ಕುಮಾರ್ ಮೊಬೈಲ್ ಕೂಡ ವರ್ಕ್ ಆಗ್ತಿಲ್ಲ. ಹೀಗಾಗಿ ಯಾರು ಆ ನಂಬರ್ ಗೆ ದುಡ್ಡು ಹಾಕಿಲ್ಲ.

ಸೈಬರ್ ಕ್ರಿಮಿನಲ್ ಗಳು ಈ ನಂಬರ್ ಅನ್ನು ಹ್ಯಾಕ್ ಮಾಡಿ, ಅವರ ಸಂಪರ್ಕ ಪಟ್ಟಿಯಲ್ಲಿದ್ದ ಆಪ್ತ ಸ್ನೇಹಿತರಿಗೆ ತುರ್ತು ಸಂದೇಶ ರವಾನಿಸಿ ವಂಚಿಸಲು ಯತ್ನಿಸಿದ್ದಾರೆ.  whatsapp ಹ್ಯಾಕ್‌ ಮಾಡಿ ಅವರದೇ ನಂಬರ್‌ ನಲ್ಲಿ  ಸಂದೇಶ ಕಳುಹಿಸಿದ ವಂಚಕ, ಅರೆಬರೆ ಇಂಗ್ಲಿಷ್ನಲ್ಲಿ “ನನ್ನ UPI ಕೆಲಸ ಮಾಡುತ್ತಿಲ್ಲ, ತೀರಾ ತುರ್ತಾಗಿ ₹60,000 ಬೇಕಾಗಿದೆ. ಕೇವಲ ಎರಡು ಗಂಟೆಯೊಳಗೆ ವಾಪಸ್ ಮಾಡುತ್ತೇನೆ” ಎಂದು ಅಂಗಲಾಚಿದ್ದಾನೆ. ಈ ಹಣವನ್ನು ಅವಿನಾಶ್ ಕುಮಾರ್ ಎಂಬ ವ್ಯಕ್ತಿಯ 9241745226 ಸಂಖ್ಯೆಗೆ ಕಳುಹಿಸುವಂತೆ ಸೂಚಿಸಿದ್ದಾನೆ.ಸ್ನೇಹಿತನ ಕಷ್ಟಕ್ಕೆ ಮರುಗಿದರೂ, ಸಂದೇಶದ ಭಾಷೆ ಮತ್ತು ಅಪರಿಚಿತ ವ್ಯಕ್ತಿಯ ಖಾತೆಗೆ ಹಣ ಹಾಕಲು ಹೇಳಿದ್ದರಿಂದ ಸಂಶಯಗೊಂಡ ಗೆಳೆಯರು,  ಅವರನ್ನು ಸಂಪರ್ಕಿಸಿದ್ದಾರೆ, ಆದರೆ, ಅವರ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ. ಇದು ವಂಚಕರ ಪೂರ್ವಯೋಜಿತ ತಂತ್ರವಾಗಿತ್ತು. ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗದಂತೆ ಮಾಡಿ, ತುರ್ತಿನ ಲಾಭ ಪಡೆಯುವುದೇ ಅವರ  ವಂಚನ ಕಾರ್ಯಶೈಲಿಯಾಗಿತ್ತು. ಘಟನೆಯಿಂದ ಆಘಾತಕ್ಕೊಳಗಾದ  ತೊಂದರೆಗೆ ಒಳಗಾದ ವ್ಯಕ್ತಿಯೂ , ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ವಂಚನೆಗೊಳಗಾದವರಿಗೆ ಪಾರ್ಸೆಲ್ ಇದೆಯೆಂದು ಒಂದು ಕರೆ ಬಂದಿರುತ್ತದೆ. ಅವರು ಕೊಟ್ಟ ನಂಬರ್ ಗೆ ಕರೆ ಮಾಡುವ ಮೊದಲು * # ಬಟನ್ ಗಳನ್ನು ಒತ್ತಲು ಹೇಳಿದ್ದಾರೆ. ಅದರಂತೆ ಕರೆ ಮಾಡಿದಾಗ ಪೂರ್ತಿ ಮೊಬೈಲ್ ಜಾಮ್ ಆಗಿದೆ. ತಕ್ಷಣವೇ  ವಾಟ್ಸಾಪ್ ಹ್ಯಾಕರ್ ಕೈಯ ನಿಯಂತ್ರಣಕ್ಕೆ ಸಿಲುಕಿಕೊಂಡಿದೆ ಎನ್ನಲಾಗಿದೆ.

 ಹಾಗಾದರೆ ಏನು ಮಾಡಬೇಕು?

ಕಾನೂನು ಕ್ರಮಗಳು ಈ ಪಿಡುಗನ್ನು ಮಟ್ಟಹಾಕಲು ಸಮಯ ತೆಗೆದುಕೊಳ್ಳಬಹುದು. ಆದರೆ, ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.

  1. ಭದ್ರತಾ ಕವಚ (Two-Step Verification): ತಕ್ಷಣವೇ ನಿಮ್ಮ ವಾಟ್ಸ್ಯಾಪ್ ಸೆಟ್ಟಿಂಗ್ಸ್ನಲ್ಲಿ ‘ಟೂ-ಸ್ಟೆಪ್ ವೆರಿಫಿಕೇಶನ್’ ಅನ್ನು ಸಕ್ರಿಯಗೊಳಿಸಿ. ಇದು ನಿಮ್ಮ ಖಾತೆಗೆ ಹೆಚ್ಚುವರಿ ಭದ್ರತೆ ನೀಡುತ್ತದೆ.
  2. ವಂಚನೆಯ ಗಾಳ (ಅಪರಿಚಿತ ಲಿಂಕ್): ವಾಟ್ಸ್ಯಾಪ್ ಅಥವಾ ಯಾವುದೇ ಮಾಧ್ಯಮದಲ್ಲಿ ಬರುವ ಅಪರಿಚಿತ ಲಿಂಕ್ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ.
  3. ದೃಢೀಕರಣ (Verification is Key): ನಿಮ್ಮ ಸ್ನೇಹಿತರು, ಸಂಬಂಧಿಕರಿಂದ ಹಣ ಕೇಳುವ ಸಂದೇಶ ಬಂದರೆ, ಎಷ್ಟೇ ತುರ್ತಿದ್ದರೂ, ಅವರಿಗೆ ನೇರವಾಗಿ ಕರೆ ಮಾಡಿ ಖಚಿತಪಡಿಸಿಕೊಳ್ಳದೆ ಒಂದೇ ಒಂದು ರೂಪಾಯಿ ಕಳುಹಿಸಬೇಡಿ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "Cyberfraud: ಎಚ್ಚರ!!! ವಾಟ್ಸಾಪ್ ಕೂಡ ಸುರಕ್ಷಿತವಲ್ಲ – ಹಣ ಕೇಳಿದರು ಎಂದು ಕಳಿಸುವ ಮುನ್ನ ಜಾಗ್ರತೆ ವಹಿಸಿ – ಇಲ್ಲಿದೆ ವಿವರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*