

OPTIC WORLD
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ವತಿಯಿಂದ ಬಂಟ್ವಾಳ ನಂ.೧, ೨ ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಂಟ್ವಾಳದ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಆಗಮಿಸಿದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಹವಾಲುಗಳನ್ನು ಆಲಿಸಿದರು. ಬಂಟ್ವಾಳ ಎಕ್ಸಿಕ್ಯುಟಿವ್ ಇಂಜಿನಿಯರ್ ವೆಂಕಟೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳಾದ ನಾರಾಯಣ ಭಟ್ ಮತ್ತು ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದು, ಅಹವಾಲು ಗಳನ್ನು ಆಲಿಸಿದರು. ಸ್ಥಳದಲ್ಲಿ ಸುಮಾರು 12ಕ್ಕೂ ಅಧಿಕ ದೂರುಗಳು ಬಂದರೆ, ದೂರವಾಣಿ ಮೂಲಕವೂ ಅಹವಾಲುಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೃಷ್ಣರಾಜ್, ಗ್ರಾಹಕರು ಇಪ್ಪತ್ತು ರೂಪಾಯಿಗಳಿಗೆ ಬೇಕಾಗಿ ಕಚೇರಿಗೆ ಬರಬೇಕು ಎಂದಿಲ್ಲ, ಆನ್ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಬಳಸಿಕೊಳ್ಳಿ, ಕ್ಯೂ ಆರ್ ಕೋಡ್ ಅನ್ನು ಉಪಯೋಗಿಸಿಕೊಳ್ಳಿ ಎಂದರು.
ಪವರ್ ಮ್ಯಾನ್ ಕೆಲಸದ ವೈಖರಿ, ಪವರ್ ಮ್ಯಾನ್ ಗಳಿಗೆ ಲ್ಯಾಡರ್ ಒದಗಿಸುವ ಕುರಿತು, ಹಳತಾದ ವಿದ್ಯುತ್ ತಂತಿಗಳು, ಸಣ್ಣ ಗಾಳಿಗೂ ಕರೆಂಟ್ ಹೋಗುವ ವಿಚಾರ ಹಾಗೂ ಮೀಟರ್ ರೀಡರ್ ಸಮಯಕ್ಕೆ ಸರಿಯಾಗಿ ಬಾರದ ವಿಚಾರ ಸಹಿತ ಅಧಿಕಾರಿಗಳ ಸ್ಪಂದನೆ ಹಾಗೂ ಐಪಿ ಸೆಟ್ ಗೆ ವಿದ್ಯುತ್ ಒದಗಿಸುವ ಬಗ್ಗೆ ಹಲವರು ತಮ್ಮ ಅಹವಾಲು ಮಂಡಿಸಿದರು. ಸಜೀಪಮೂಡ ಗ್ರಾಪಂ ಸದಸ್ಯ ಅಬ್ದುಲ್ ಕರೀಂ, ಅಮ್ಮುಂಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ ನಾವೂರಿನ ಸುನಿಲ್ ಲೋಬೊ, ಸಮದ್, ಸ್ಟ್ಯಾನಿ ಜೆರಾಲ್ಡ್ ಸಿಕ್ವೇರಾ ಮತ್ತಿತರರು ವಿಚಾರ ಮಂಡಿಸಿದರು.


Be the first to comment on "MESCOM Bantwal: ಮೆಸ್ಕಾಂನಿಂದ ಬಂಟ್ವಾಳದಲ್ಲಿ ಜನಸಂಪರ್ಕ ಸಭೆ, ಅಹವಾಲು ಸ್ವೀಕಾರ"