
ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ತುಳು ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಚಿ.ರಮೇಶ್ ಕಲ್ಲಡ್ಕ ಅವರಿಗೆ ನುಡಿನಮನ ಕಾರ್ಯಕ್ರಮ ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಂಜೆ ನಡೆಯಿತು.


OPTIC WORLD
ಕಲ್ಲಡ್ಕದ ಶಾರದಾ ಸೇವಾ ಪ್ರತಿಷ್ಠಾನ ಹಾಗೂ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾರದಾ ಪ್ರತಿಷ್ಠಾನದ ಸ್ಥಾಪಕ ಸದಸ್ಯರೂ ಆಗಿದ್ದ ಹಾಗೂ ಆರೆಸ್ಸೆಸ್ ಸ್ವಯಂಸೇವಕರು, ಬಿಜೆಪಿ ಕಾರ್ಯಕರ್ತರು, ನಾಟಕ ಕಲಾವಿದರು, ಕಾರ್ಯಕ್ರಮ ನಿರೂಪಕರಾಗಿ,ಚಿತ್ರನಟ ಮತ್ತು ಕ್ರೀಡಾಪಟುವಾಗಿ ಗುರುತಿಸಿಕೊಂಡ ಚಿ.ರಮೇಶ್ ಕಲ್ಲಡ್ಕ ಅವರ ಬದುಕಿನ ಕುರಿತು ಅಭಿಮಾನಿಗಳು ಮಾತನಾಡಿದರು.

ನುಡಿನಮನ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್.ಪ್ರಮುಖರಾದ ಶ್ರೀರಾಮ ವಿದ್ಯಾ ಕೇಂದ್ರದ ಸ್ಥಾಪಕ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ, ರಂಗಭೂಮಿಯೇ ಅವರಿಗೆ ಬದುಕಾಗಿತ್ತು, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ್ದಾರೆ. ಚಿ.ರಮೇಶ್ ಅವರು ಮಾಡುತ್ತಿದ್ದ ನಾಟಕದ ಪಾತ್ರಗಳೂ ಜೀವನದಲ್ಲಿ ನಾವು ಹೇಗೆ ಇರಬೇಕು ಎಂಬ ಸಂದೇಶವನ್ನೂ ನೀಡುತ್ತಿತ್ತು ಎಂದರು.

ರಂಗಕರ್ಮಿ, ನಟ, ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಕಳೆದ 28 ವರ್ಷಗಳಿಂದ ಕಲಾಸಂಗಮದ ಕಲಾವಿದನಾಗಿದ್ದ ರಮೇಶ್ ಅವರ ಒಡನಾಟದ ಕುರಿತು ವಿವರಿಸಿದರು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ನರಸಿಂಹ ಕಲ್ಲಡ್ಕ, ಪದ್ಮನಾಭ ರೈ, ನಾಗೇಶ್ ಕಲ್ಲಡ್ಕ ಅವರು ನುಡಿನಮನ ಸಲ್ಲಿಸಿದರು.


ಶ್ರೀ ಶಾರದಾ ಸೇವ ಪ್ರತಿಷ್ಠಾನ ಅಧ್ಯಕ್ಷ ಯತಿನ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ವಂದಿಸಿದರು. ಕೋಶಾಧಿಕಾರಿ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.



Be the first to comment on "Kalladka: ರಂಗಭೂಮಿ ಕಲಾವಿದ ಚಿ.ರಮೇಶ್ ಕಲ್ಲಡ್ಕ ಅವರಿಗೆ ನುಡಿನಮನ"