ಬಿ ಸಿ ರೋಡ್ — ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಕ್ರೀಡಾ ಕೂಟ.ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಗಳು ಹಾಗೂ ರಕ್ಷಕ ಶಿಕ್ಷಕ ಸಂಘ ದ ಆಶ್ರಯದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಹಳೇ ವಿದ್ಯಾರ್ಥಿ ಗಳಿಗೆ, ಪೋಷಕರಿಗೆ ಸಿಬ್ಬಂದಿ ವರ್ಗದವರಿಗೆ ಕೆಸರ್ಡ್ ಒಂಜಿ ದಿನ ಕೆಸರು ಗದ್ದೆ ಕ್ರೀಡಾಕೂಟ ಸ್ಪರ್ಶ ಕಲಾ ಮಂದಿರ ದ ಗದ್ದೆಯಲ್ಲಿ ನಡೆಯಿತು.

ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿಯ ಸೇವಾ ಸಮಿತಿ ಅಧ್ಯಕ್ಷ ರಾದ ಶ್ರೀ ವಿಶ್ವನಾಥ್ ಬಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈರಿಸಿದರು.ಮುಖ್ಯ ಅತಿಥಿಗಳಾದ ಶ್ರೀ ಸಂಜೀವ ಪೂಜಾರಿ ಗುರುಕೃಪ ಬಿ ಸಿ ರೋಡ್ ಇವರು ತೆಂಗಿನ ಗರಿ ಅರಳಿಸಿ ಕ್ರೀಡಾ ಕೂಟ ಕ್ಕೆ ಶುಭ ಕೋರಿದರು.
ಮುಖ್ಯಾ ಅತಿಥಿ ಗಳಲ್ಲಿ ಓರ್ವರಾದ ಶ್ರೀ ಸುನೀಲ್ ಆಚಾರ್ಯ ಅಪೂರ್ವ ಜ್ಯುವೆಲ್ಲರ್ಸ್ ಬಿ ಸಿ ರೋಡ್ ಗದ್ದೆಗೆ ಹಾಲು ಹಾಕುವ ಮುಖೇನ ಕ್ರೀಡಾ ಕೂಟಕ್ಕೆ ಯಶಸ್ಸನ್ನು ಕೋರಿದರು.ಗೌರವ ಅತಿಥಿಗಳಾಗಿ ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಮ್ಯಾಥ್ಯೂ ಫ್ರಾನ್ಸಿಸ್ ಡಿ ಕುನ್ಹಾ ,ಶ್ರೀಮತಿ ಸವಿತಾ ಅರುಣ್ ಪ್ರಕಾಶ್ ಮೊಡoಕಾಪು, ಶ್ರೀ ಅಭಿಲಾಶ್ ಭಟ್ , ಶ್ರೀ ಜ್ಞಾನೇಶ್ ರಾವ್,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾದ ಶ್ರೀಮತಿ ತೇಜಸ್ವಿನಿ ಪೂಜಾರಿ ಯವರು ಕ್ರೀಡಾಕೂಟ ಕ್ಕೆ ಶುಭ ಹಾರೈಸಿದರು.ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಸುಂದರ್ , ಕೋಶಾಧ್ಯಕ್ಷ ರಾದ ಶ್ರೀಮತಿ ಜಯಶ್ರೀ,ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಾಜೇಶ್ ಅಮಿನ್ ಮತ್ತು ಶ್ರೀ ಅಶ್ರಿತ್ ಅಮೀನ್ ಹಾಗೂ ಸಂಸ್ಥೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ಶಾಲಾ ಸಂಚಾಲಕರಾದ ಶ್ರೀ ಐತಪ್ಪ ಪೂಜಾರಿ ಸ್ವಾಗತಿಸಿ ಸದಸ್ಯರಾದ ಶ್ರೀಮತಿ ಆರತಿ ಅಮೀನ್ ವಂದಿಸಿದರು.ಪೋಷಕರಾದ ಶ್ರೀಮತಿ ಸುಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಂಸ್ಥೆಯ ಶಿಕ್ಷಕಿಯರು ಹಾಗೂ ಶಿಕ್ಷಕರ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಗಳಿಂದ ನೃತ್ಯ ಪ್ರದರ್ಶನ ದೊಂದಿಗೆ ಕ್ರೀಡಾಕೂಟ ಕ್ಕೆ ಚಾಲನೆ ನೀಡಲಾಯಿತು. ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಪೋಷಕರು ಸಹಕರಿಸಿದರು

OPTIC WORLD

CHESS TRAINING AT RAKTHESHWARI TEMPLE BCROAD


Be the first to comment on "ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ"