
ಕೇಪು ಗ್ರಾಮದ ಕಟ್ಟೆ ಎಂಬಲ್ಲಿ ತೋಡಿನ ಬದಿ ಕಲ್ಲಿನ ತಡೆಗೋಡೆ ಕುಸಿದು ನೀರ್ಕಜೆ – ಮಣಿಯರಪಾದೆ ರಸ್ತೆ ಬಿರುಕು ಬಿಟ್ಟಿರುತ್ತದೆ.

OPTIC WORLD


ಪೆರುವಾಯಿ ಗ್ರಾಮದ ಕೆದುವಾರ್ ಎಂಬಲ್ಲಿ ಕುದ್ದುಪದವು – ಪಕಳಕುಂಜ ಜಿಲ್ಲಾ ಮುಖ್ಯ ರಸ್ತೆ ಗೆ ಗುಡ್ಡ ಕುಸಿದಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಗುರುವಾರ ಕಡಿಮೆಯಾಗಿದ್ದರೂ ಹಾನಿ ತಪ್ಪಿಲ್ಲ. ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ಗಳಿಗೆ ಹಾನಿಯಾಗಿವೆ, ಸಂಚಾರಕ್ಕೆ ಇದರಿಂದ ತೊಂದರೆ ಉಂಟಾಯಿತು.
ಪೆರುವಾಯಿ ಗ್ರಾಮದ ಕೆದುವಾರ್ ಎಂಬಲ್ಲಿ ಕುದ್ದುಪದವು – ಪಕಳಕುಂಜ ಜಿಲ್ಲಾ ಮುಖ್ಯ ರಸ್ತೆ ಗೆ ಗುಡ್ಡ ಕುಸಿದಿದೆ. ಮೇರಮಜಲು ಗ್ರಾಮ ದ ಅಬ್ಬೆಟ್ಟು ಪಾರಾಜೆ ರಸ್ತೆಗೆ ಗುಡ್ಡ ಜರಿದು ಮರ ರಸ್ತೆಗೆ ಬಿದ್ದಿದೆ. ಕರಿಯಂಗಳ ಗ್ರಾಮ ದ ಕಲ್ಕುಟ್ಟ ಎಂಬಲ್ಲಿ ಗುಡ್ಡೆ ಕುಸಿದು ರಸ್ತೆ ಬಂದ್ ಆಯಿತು. ಬಳಿಕ ಸ್ಥಳೀಯಾಡಳಿತ ತೆರವು ಕಾರ್ಯ ನಡೆಸಿತು. ಕೇಪು ಗ್ರಾಮದ ಕಟ್ಟೆ ಎಂಬಲ್ಲಿ ತೋಡಿನ ಬದಿ ಕಲ್ಲಿನ ತಡೆಗೋಡೆ ಕುಸಿದು ನೀರ್ಕಜೆ – ಮಣಿಯರಪಾದೆ ರಸ್ತೆ ಬಿರುಕು ಬಿಟ್ಟಿರುತ್ತದೆ. ರಸ್ತೆ ಕುಸಿದು ಬೀಳುವ ಸಂಭವವಿದ್ದು, ಮುಂಜಾಗರೂತಾ ಕ್ರಮವಾಗಿ ರಸ್ತೆ ಬಂದ್ ಮಾಡಲಾಯಿತು.


Be the first to comment on "Bantwal Rain Damage: ಮಳೆಗೆ ಬಿರುಕುಬಿಟ್ಟ ರಸ್ತೆ, ಇನ್ನೊಂದೆಡೆ ಕುಸಿದ ಗುಡ್ಡೆ"