Kulkunda: ಅಪಘಾತ ಗಾಯಾಳು ನೆರವಿಗೆ ಮೊರೆ – details

ಮಂಗಳೂರು: ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ನಿವಾಸಿಯಾದ ಸುಮಿತ್ರಾ (೪೬) ಅವರ ಚಿಕಿತ್ಸೆಗೆ ನೆರವಾಗುವಂತೆ ಅವರ ಪುತ್ರ ಶ್ರೇಯಸ್ ಕೆ.ಬಿ. ವಿನಂತಿಸಿದ್ದಾರೆ.


ಸುಮಿತ್ರಾ ಅವರು ಜುಲೈ ೩ರಂದು ಕೆಲಸಕ್ಕೆಂದು ಕುಲ್ಕುಂದದಿಂದ ಮರ್ಧಾಳ ಕಡೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಕೈಕಂಬ ಬಳಿ ರಿಕ್ಷಾ ಪಲ್ಟಿಯಾಗಿ ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ರಿಕ್ಷಾದ ಹಿಂಬದಿ ಕುಳಿತಿದ್ದ ಅವರ ತಲೆಯ ಬಲಭಾಗಕ್ಕೆ ತೀವ್ರ ಗಾಯವಾಗಿದ್ದು, ತಕ್ಷಣವೇ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ೧೦೮ ಆಂಬುಲೆನ್ಸ್ ಮೂಲಕ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ, ನಂತರ ಮಂಗಳೂರಿನ ಅಂಬೇಡ್ಕರ್ ವೃತ್ತದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸ್ತುತ ಅವರು ಚಿಕಿತ್ಸೆಯಲ್ಲಿದ್ದು, ತಲೆಯ ಶಸಚಿಕಿತ್ಸೆ ನಡೆಸಲಾಗಿದೆ. ಮುಂದೆಯೂ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಒಟ್ಟು ವೆಚ್ಚ ಸುಮಾರು ೧೫ ಲಕ್ಷ ರೂ.ಗೂ ಹೆಚ್ಚು ಆಗಬಹುದೆಂದು ವೈದ್ಯರು ತಿಳಿಸಿದ್ದಾರೆ.
ಸುಮಿತ್ರಾ ಅವರ ಕುಟುಂಬವು ಆರ್ಥಿಕವಾಗಿ ದುರ್ಬಲವಾಗಿದ್ದು, ಯಾವುದೇ ಕೃಷಿ, ಇತರ ಆದಾಯದ ಮೂಲಗಳು ಇರುವುದಿಲ್ಲ. ಇವರ ಪತಿ ಟೈಲರ್ ವೃತ್ತಿ ಮಾಡುತ್ತಿದ್ದು, ಇತ್ತೀಚೆಗೆ ಅವರಿಗೆ ಬೆನ್ನುಮೂಳೆಯ ಸಮಸ್ಯೆಯಿಂದ ಮನೆ ಖರ್ಚು ಹಾಗೂ ಮಕ್ಕಳ ವಿದ್ಯಾಭ್ಯಾಸದ ಖರ್ಚು ಎಲ್ಲವೂ ಸುಮಿತ್ರಾ ಅವರ ಮೇಲಿತ್ತು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ಚಿಕಿತ್ಸಾ ವೆಚ್ಚವನ್ನು ಭರಿಸುವುದು ಈ ಕುಟುಂಬಕ್ಕೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹೃದಯಿ ದಾನಿಗಳು ಅಮ್ಮನ ಚಿಕಿತ್ಸೆಗೆ ನೆರವಾಗುವಂತೆ ಸುಮಿತ್ರಾ ಅವರ ಪುತ್ರ ಶ್ರೇಯಸ್ ಕೆ.ಬಿ. ವಿನಂತಿಸಿದ್ದಾರೆ. ಮಾಹಿತಿಗೆ ಶ್ರೇಯಸ್ (ದೂ. 9108243172) ಅವರನ್ನು ಸಂಪರ್ಕಿಸಬಹುದು.
—————-
ನೆರವು ನೀಡುವವರು ಸುಮಿತ್ರಾ ಅವರ ಪುತ್ರಿ ಶ್ರೇಯಾ ಕೆ.ಬಿ. ಅವರ ಬ್ಯಾಂಕ್ ಖಾತೆಗೆ ಹಣ ನೀಡಬಹುದು.
Bank of Baroda -ಸುಬ್ರಹ್ಮಣ್ಯ ಶಾಖೆ
ಅಕೌಂಟ್ ನಂಬರ್: 70570100004654
IFSC: BARB0VJSUBR
ಗೂಗಲ್ ಪೇ ನಂಬರ್: 9743203656

ಜಾಹೀರಾತು
ಜಾಹೀರಾತು

Be the first to comment on "Kulkunda: ಅಪಘಾತ ಗಾಯಾಳು ನೆರವಿಗೆ ಮೊರೆ – details"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*