
ಹಿಂದು ಜನಜಾಗೃತಿ ಸಮಿತಿ ವತಿಯಿಂದ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಗುರುಪೂರ್ಣಿಮಾ ಮಹೋತ್ಸವ ನಡೆಯಿತು.ಎಲ್ಲರೂ ಆಧ್ಯಾತ್ಮಿಕ ಸಾಧನೆಯೊಂದಿಗೆ ರಾಷ್ಟ್ರ-ಧರ್ಮದ ಕಾರ್ಯ ಮಾಡುವ ಸಂಕಲ್ಪ ಮಾಡೋಣ ಎಂದು ಈ ವೇಳೆ ಸನಾತನ ಸಂಸ್ಥೆಯ ಮಂಜುಳ ಗೌಡ ಹೇಳಿದರು.

ಪುತ್ತೂರಿನ ಸುಬ್ರಹ್ಮಣ್ಯ ನಟೋಜ ಮಾತನಾಡಿ ಹಿಂದೂ ಧರ್ಮದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷ ಇಂದಿನ ದಿನಗಳಲ್ಲಿ ಮರೆತುಹೋಗಿವೆ. ಈ ಪುರುಷಾರ್ಥಗಳ ಪ್ರಕಾರ ಸಾಧನೆ ಮಾಡಿದಾಗ ಮಾತ್ರ ನಾವು ನಿಜವಾದ ಹಿಂದೂಗಳಾಗುತ್ತೇವೆ ಎಂದರು

ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅನಿಲ್ ಪಂಡಿತ್, ಸರಪಾಡಿ ಅಶೋಕ ಶೆಟ್ಟಿ, ಮಿಥುನ್ ಪೂಜಾರಿ, ಬಿ. ವಿ. ಶೆಣೈ, ಪ್ರೊ. ಗಿರೀಶ್ ಹೆಗ್ಡೆ, ವಿನೋದ್, ತಾರಾನಾಥ್ ಕೊಟ್ಟಾರಿ, ಅಶ್ವಿನಿ, ಡಾ. ಶಿವಪ್ರಸಾದ್ ಶೆಟ್ಟಿ, ವಿಶ್ವನಾಥ್ ಪಂಡಿತ್, ದಿನೇಶ್ ಜೈನ್ ಪುತ್ತೂರು, ಕೃಷ್ಣ ಪ್ರಸಾದ್ ಲಕ್ಷ್ಮೀಬೆಟ್ಟ, ಪ್ರದೀಪ್, ಮನೋಹರ್ ಶಾಂತಿನಗರ, ನೋಣಯ್ಯ ಪೂಜಾರಿ ಶಂಭೂರು, ಸಂಜೀವ ಶೆಟ್ಟಿ, ನಾಗೇಶ್ ಕುದನೆ ಸೇರಿದಂತೆ 300 ಹೆಚ್ಚು ಮಂದಿ ಭಾಗವಹಿಸಿದ್ದರು.



Be the first to comment on "Bantwal: ಹಿಂದು ಜನಜಾಗೃತಿ ಸಮಿತಿ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ"