ಬಂಟ್ವಾಳ : ವಿದ್ಯೆ, ಜ್ಞಾನ, ಸಂಸ್ಕಾರ ನೀಡಿದ ಗುರುಗಳಿಗೆ ಗೌರವ ಸಲ್ಲಿಸುವ ಮೂಲಕ ಗುರುಪೂರ್ಣಿಮೆ ಆಚರಣೆಯನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಅವರು ನೆರವೇರಿಸಿದರು.






ವಿದ್ಯಾರ್ಜನೆಯ ಮೂಲಕ ವಿದ್ಯೆ, ಜ್ಞಾನ, ಮತ್ತು ಸಂಸ್ಕಾರವನ್ನು ಹಾಗು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಣವನ್ನು ಮಾಡಲು ಪ್ರೇರಣೆ ಕೊಟ್ಟ ಗುರುಗಳಾದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ ಗೋಪಾಲ್ , ಸಾಮಾಜಿಕ ಕ್ಷೇತ್ರದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯದ ವ್ಯಕ್ತಿ ಬೆಳೆಯಬೇಕೆನ್ನುವ ಇಚ್ಛೆಯಿಂದ ರಾಜಕೀಯ ಕ್ಷೇತ್ರಕ್ಕೆ ಪ್ರೇರಣೆ ನೀಡಿದ ಮಾರ್ಗದರ್ಶಕ ರಾಜಕೀಯ ಗುರುಗಳಾದ ಗೋಪಾಲ್ ಪೂಜಾರಿಯವರಿಗೆ ಗುರುವಂದನೆ ಕಾರ್ಯಕ್ರಮವನ್ನು ನೆರವೇರಿದ್ದಾಗಿ ದಿನೇಶ್ ಅಮ್ಟೂರು ಹೇಳಿದರು.
ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಪ್ರಭಾಕರ ಶೆಟ್ಟಿ ಬೈದರಡ್ಕ, ಮಂಡಲದ ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮ, ಶಕ್ತಿ ಕೇಂದ್ರ ಪ್ರಮುಖ್ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಕೃಷ್ಣ ಪೂವಳ, ಬೂತ್ ಕಾರ್ಯದರ್ಶಿ ದಾಮೋದರ ಪೂಜಾರಿ, ತ್ರಿವೇಣಿ ದಿನೇಶ್ ಅಮ್ಟೂರು, ಪಾಲಕ್ಷ ಕುಲಾಲ್, ಧನಂಜಯ , ಗಣೇಶ್ ಕುಲಾಲ್, ನಿಶಾಂತ್ ಡಿ ಆಮ್ಟೂರು, ಮಯೂರಿ ಡಿ ಆಮ್ಟೂರ್ ಪ್ರಮುಖರು ಉಪಸ್ಥಿತರಿದ್ದರು


Be the first to comment on "ವಿದ್ಯೆ, ಜ್ಞಾನ, ಸಂಸ್ಕಾರ ನೀಡಿದ ಗುರುಗಳಿಗೆ ಗೌರವ ಸಲ್ಲಿಸುವ ಮೂಲಕ ಗುರುಪೂರ್ಣಿಮೆ ಆಚರಣೆ"