ಬಂಟ್ವಾಳ: ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ 45 ಕಡೆಗಳಲ್ಲಿ ಹಾಗೂ ದಕ್ಷಿಣ ಕನ್ನಡದ ಮೂರು ಕಡೆ ಜುಲೈ 10ರ ಗುರುವಾರ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸಿದೆ.

ರಾಷ್ಟ್ರರಕ್ಷಣೆಗೂ ಗುರು-ಶಿಷ್ಯ ಪರಂಪರೆ ಅಗತ್ಯವಾಗಿದ್ದು, ರಾಷ್ಟ್ರಪ್ರೇಮವನ್ನು ಹೆಚ್ಚಿಸುವ ಗುರುಪೂರ್ಣಿಯನ್ನು ಆಚರಿಸುವ ಉದ್ದೇಶದಿಂದ, ಗುರುವಾರ, ಹಿಂದು ಜನಜಾಗೃತಿ ಸಮಿತಿ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸಲಾಗಿದೆ. ಈ ವರ್ಷ ಈ ಮಹೋತ್ಸವಗಳು ದೇಶಾದ್ಯಂತ 45 ಸ್ಥಳಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಸ್ಥಳಗಳಲ್ಲಿ ಜರುಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಸಂಜೆ 5 ಗಂಟೆಗೆ, ಮಂಗಳೂರು ಕುದ್ರೋಳಿ ಕೂಟಕ್ಕಲ ಆಡಿಟೋರಿಯಂ, ಶ್ರೀ ಭಗವತಿ ಕೊಡಿಯಾಲ್ಬೈಲ್ ನಲ್ಲಿ ಸಂಜೆ 5 ಗಂಟೆಗೆ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯಲಿದೆ.
ಶ್ರೀ ವ್ಯಾಸಪೂಜೆ ಮತ್ತು ಪ. ಪೂ. ಭಕ್ತರಾಜ ಮಹಾರಾಜರ ಭಾವಚಿತ್ರದ ಪೂಜೆ, ಸಂತರ ಸಂದೇಶ, ಕಿರುಚಿತ್ರ, ಸ್ವರಕ್ಷಣೆಯ ಪ್ರಾತ್ಯಕ್ಷಿಕೆಗಳು ಮತ್ತು ಸಾಮೂಹಿಕ ರಾಮನಾಮ ಜಪ ನಡೆಯಲಿದೆ. ವಿಶೇಷ ಮಾರ್ಗದರ್ಶನ, ಇಲ್ಲಿ ಆಧ್ಯಾತ್ಮಿಕ, ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳ ಪ್ರದರ್ಶನ ಮತ್ತು ಫಲಕಗಳ ಪ್ರದರ್ಶನವನ್ನೂ ಏರ್ಪಡಿಸಲಾಗುವುದು ಎಂದು ಸಮಿತಿಯ ವಿಜಯಕುಮಾರ್ ತಿಳಿಸಿದ್ದಾರೆ.


Be the first to comment on "GURUPOORNIMA: ದೇಶಾದ್ಯಂತ 45 ಕಡೆ, ದಕ್ಷಿಣ ಕನ್ನಡದ ಮೂರು ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ"