ನಾಳೆ ಭಾರತ ಬಂದ್ಗೆ ಕರೆ ನೀಡಲಾಗಿದೆ. ಭಾರತದಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು ನಾಳೆ ಮುಷ್ಕರಕ್ಕೆ ಇಳಿಯಲಿದ್ದು, ತಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಡಲು ಮುಂದಾಗಿದ್ದಾರೆ. ಹಾಗಾದ್ರೆ ನಾಳೆ ಭಾರತ್ ಬಂದ್ ಹಿನ್ನಲೆ ಏನು ಇರುತ್ತೆ? ಏನು ಇರಲ್ಲ? ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ — APUL ALVA
ಜುಲೈ 9, 2025ರ ಬುಧವಾರ, ಭಾರತದಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಅಥವಾ ‘ಭಾರತ್ ಬಂದ್’ನಲ್ಲಿ ಭಾಗವಹಿಸಲಿದ್ದಾರೆ. 10 ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟವು ಕರೆ ನೀಡಿರುವ ಈ ಮುಷ್ಕರ ಕೇಂದ್ರ ಸರ್ಕಾರದ “ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ” ನೀತಿಗಳನ್ನು ಪ್ರತಿಭಟಿಸುವ ಗುರಿಯನ್ನು ಹೊಂದಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ಕುರಿತು ಆಂಗ್ಲ ಭಾಷೆಯಲ್ಲಿ CITIZEN NEWS PUTTUR ವರದಿ ಮಾಡಿದ್ದು, ಅದರ ಲಿಂಕ್ ಇಲ್ಲಿದೆ.
ನಾಳಿನ ದೊಡ್ಡ ಪ್ರಮಾಣದ ಪ್ರತಿಭಟನೆಯಿಂದ ಬ್ಯಾಂಕಿಂಗ್, ವಿಮೆ, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಸಾರಿಗೆ, ಮತ್ತು ಸಾರ್ವಜನಿಕ ವಲಯದ ಕೈಗಾರಿಕೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ವ್ಯಾಪಕ ಅಡಚಣೆಯಾಗುವ ನಿರೀಕ್ಷೆಯಿದೆ. ಈ ಮುಷ್ಕರವು ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಬ್ಯಾಂಕಿಂಗ್ ಮತ್ತು ವಿಮಾ ಸೇವೆಗಳು, ಅಂಚೆ ಸೇವೆಗಳು, ಕಲ್ಲಿದ್ದಲು ಗಣಿಗಾರಿಕೆ ಮತ್ತು ಕಾರ್ಖಾನೆಗಳು, ಸಾರಿಗೆ ವ್ಯವಸ್ಥೆ, ಸಾರ್ವಜನಿಕ ವಲಯದ ಉದ್ಯಮಗಳಿಗೆ ಪರಿಣಾಮ ಬೀರಬಹುದು ಎನ್ನಲಾಗಿದೆ.


Be the first to comment on "ಕಾರ್ಮಿಕ ಸಂಘಟನೆಗಳಿಂದ ನಾಳೆ ಭಾರತ ಬಂದ್, ವಿವರ ಇಲ್ಲಿದೆ"