ಬಂಟ್ವಾಳ: ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಉಚಿತ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ ಗೊಂಡಿತು.

ಫೌಂಡೇಶನ್ ನ ಸಂಚಾಲಕರಾದ ವಾಸುದೇವ ಐತಾಳ್ ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡಿದರು. ಯಕ್ಷಗಾನ ಕಲೆಯ ವೈಶಿಷ್ಟ್ಯ ಮತ್ತು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕೆಯಿಂದಾಗಬಹುದಾದ ಪ್ರಯೋಜನಗಳ ಕುರಿತು ಅವರು ಮಾತನಾಡಿದರು.ಯಕ್ಷಗಾನ ಅಭ್ಯಾಸ ಪಠ್ಯಪುಸ್ತಕ ವನ್ನು ಶಾಲೆಯ ಗ್ರಂಥಾಲಯ ಕ್ಕೆ ಕೊಡುಗೆಯಾಗಿ ನೀಡಿದರು ಅಮ್ಮುಂಜೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಯ ಅಧ್ಯಕ್ಷರು ಆಗಿರುವ ವಾಮನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಧ್ಯಾಪಕ ಅನಂತಪದ್ಮನಾಭ ಶಾಲಾಭಿವೃದ್ಧಿ ಸಮಿತಿ ಯ ಸದಸ್ಯರಾದ ಶಾಂತಿ , ಯಕ್ಷಗುರು ಸಂದೇಶ್ ಮರಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಭಾ ಭಟ್ ಸ್ವಾಗತಿಸಿದರು.ಶಾಲಿನಿ ತಂತ್ರಿ ವಂದಿಸಿದರು. ಶಾಂತಿ ನಿರೂಪಿಸಿದರು.ಶಿಕ್ಷಕರಾದ ಉಷಾಲತಾ ,ಡೋಮಿ. ಪಿ. ಉಪಸ್ಥಿತಿ ಇದ್ದರು.


Be the first to comment on "ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಬೆಂಜನಪದವು ಹೈಸ್ಕೂಲ್ ನಲ್ಲಿ ಉಚಿತ ಯಕ್ಷಗಾನ ನಾಟ್ಯ ತರಗತಿ ಆರಂಭ"