ಇದು ಬಿ.ಸಿ.ರೋಡಿನಿಂದ ಪೊಳಲಿಗೆ ತೆರಳುವ ರಸ್ತೆ. ಬಿ.ಸಿ.ರೋಡಿನ ಕೈಕಂಬ ಕ್ರಾಸ್ ನಿಂದ ತೆರಳಿ ಇನ್ನೇನು ಮೊಡಂಕಾಪು ಸಿಗುವ ಹೊತ್ತಿನಲ್ಲಿ ರೈಲ್ವೆ ಮೇಲ್ಸೇತುವೆ ಕಾಣಿಸುತ್ತದೆ. ಅದರ ಅಡಿಯಲ್ಲೇ ರಸ್ತೆ ಬಾಯಿಬಿಟ್ಟಿದೆ!!. ದೊಡ್ಡ ಹೊಂಡವೊಂದು ವಾಹನ ಸವಾರರ, ಅದರಲ್ಲೂ ದ್ವಿಚಕ್ರ ಸವಾರರ ಪ್ರಾಣಕ್ಕೆರಗಾಗುವಂತಿದೆ. ಈ ಹೊಂಡವನ್ನು ತಪ್ಪಿಸಲು ರಾಂಗ್ ಸೈಡ್ ನಲ್ಲಿ ಹೋಗುವವರೂ ಇದ್ದಾರೆ. ವಿಪರೀತ ವೇಗವಾಗಿ ಸಂಚರಿಸುವ ವಾಹನಗಳು ಹೊಂಡದ ಬಳಿ ನಿಧಾನವಾಗಿ ಚಲಿಸುವ ವಾಹನಗಳ ಹಿಂದೆ ಏನಾದರೂ ಇದ್ದರೆ, ಅಪಘಾತಕ್ಕೆ ಆಹ್ವಾನ. ಇಲ್ಲಿಂದ ಮುಂದೆ ಸಾಗುವಾಗ ಶಿಕ್ಷಣ ಸಂಸ್ಥೆಗಳು ಎದುರಾಗುತ್ತವೆ. ಸಾವಿರಾರು ಮಕ್ಕಳು ಇಲ್ಲಿಗೆ ವಿದ್ಯಾರ್ಜನೆಗೆ ಬರುತ್ತಾರೆ. ಇದಕ್ಕೆ ತೇಪೆ ಕಾರ್ಯ ನಡೆದರೂ ಮತ್ತೆ ಅದೇ ಜಾಗದಲ್ಲಿ ಹೊಂಡ ಉದ್ಭವವಾಗುತ್ತಿರುವುದು ಸೋಜಿಗವೇ ಸರಿ. ಸಂಬಂಧಪಟ್ಟವರು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.
- ನಿತ್ಯ ಪ್ರಯಾಣಿಕರು



Be the first to comment on "ಇಲ್ಲಿ ರಸ್ತೆ ಬಾಯ್ಬಿಟ್ಟಿದೆ,, ಸಂಬಂಧಪಟ್ಟವರ ಗಮನಕ್ಕೆ…!!"