ಮಕ್ಕಳಿಗೆ ನಮ್ಮ ಮೂಲ ಸಂಸ್ಕಾರ ಸಂಸ್ಕೃತಿ ಜೊತೆಗೆ ಏಕಾಗ್ರತೆಗೆ, ನೆನಪಿನ ಶಕ್ತಿ ವೃದ್ಧಿಸಲು ಭಜನೆ ಸಹಕಾರಿಯಾಗಿದೆ ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಜನಾ ಪರಿಷತ್ ವತಿಯಿಂದ ನರಿಕೊಂಬು ಅಂತರದ ಶ್ರೀ ಕೋದಂಡರಾಮ ಭಜನಾ ಮಂಡಳಿ ಸಹಯೋಗದೊಂದಿಗೆ ವಾರದ ಭಜನಾ ತರಬೇತಿ ಶಿಬಿರವನ್ನು ಭಜನಾ ಮಂಡಳಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ಪ್ರಗತಿಪರ ಕೃಷಿಕ ಪ್ರೇಮನಾಥ್ ಶೆಟ್ಟಿ ಅಂತರ, ಕೋದಂಡರಾಮ ಭಜನಾ ಮಂದಿರ ಅಧ್ಯಕ್ಷ ಚಂದ್ರಶೇಖರ ಗೌಡ,,ಜಿಲ್ಲಾ ಭಜನಾ ಪರಿಷತ್ ಸಮವ್ವಯಾಧಿಕಾರಿ ಸಂತೋಷ್,ಅಳಿಯೂರು, ಭಜನೆ ತರೆಬೆತು ದಾರರಾದ ಸಂದೇಶ್, ಗಗನ್, ಆಕಾಶ್ ಉಪಸ್ಥಿತರಿದ್ದರು.
ನರಿಕೊಂಬು ಎ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ ಸ್ವಾಗತಿಸಿದರು. ಭಜನಾ ಮಂಡಳಿ ಸದಸ್ಯ ಗಣೇಶ್ ಕುಮಾರ್ ವಂದಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಕಾರ್ಯಕ್ರಮ ನೀರೂಪಿಸಿದರು. ಸೇವಾಪ್ರತಿನಿದಿಗಳಾದ ಕುಸುಮಾವತಿ ಹಾಗೂ ಪ್ರತಿಭಾ ಸಹಕರಿಸಿದರು
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಸಂಸ್ಕಾರ, ಸಂಪ್ರದಾಯ ಬೆಳೆಸುವ ಜೊತೆಗೆ ಏಕಾಗ್ರತೆಗೆ ಭಜನೆ ಸಹಕಾರಿ: ಸಂತೋಷ್"
Be the first to comment on "ಸಂಸ್ಕಾರ, ಸಂಪ್ರದಾಯ ಬೆಳೆಸುವ ಜೊತೆಗೆ ಏಕಾಗ್ರತೆಗೆ ಭಜನೆ ಸಹಕಾರಿ: ಸಂತೋಷ್"