ಸಜೀಪಮೂಡ ಕೋಮಾಲಿ ಅಂಗನವಾಡಿ ಕೇಂದ್ರ ಹೊಸದಾಗಿಯೇ ನಿರ್ಮಾಣವಾಗಬೇಕು – ಪದೆಂಜಿಮಾರ್ ನಲ್ಲೂ ಸಮಸ್ಯೆಗಳು

ಜಾಹೀರಾತು

ಕೋಮಾಲಿ

ಪದೆಂಜಿಮಾರ್

ಇಲ್ಲಿ ಮಕ್ಕಳ ಕೊರತೆ ಇಲ್ಲ, ಸುಮಾರು 22 ಮಂದಿ ಪ್ರತಿ ದಿನ ಆಗಮಿಸುತ್ತಾರೆ. ರಸ್ತೆ ಬದಿಯೇ ಅಂಗನವಾಡಿ ಕೇಂದ್ರವಿದೆ. ಕಟ್ಟಡ ಮಾತ್ರ ಹೊರನೋಟಕ್ಕಷ್ಟೇ ಎದ್ದು ಕಾಣುತ್ತದೆ, ಒಳಗೆ ಕಾಲಿಟ್ಟರೆ ನಿಜದರ್ಶನವಾಗುತ್ತದೆ. ಸಜೀಪಮೂಡ ಗ್ರಾಮದ ಕೋಮಾಲಿ ಎಂಬಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಜೋರಾಗಿ ಮಳೆ ಬಂದರೆ, ಗಾಳಿಯ ಹೊಡೆತ ಇಡೀ ಕಟ್ಟಡಕ್ಕೆ ತಟ್ಟುವುದಷ್ಟೇ ಅಲ್ಲ, ಒಳಗೂ ನುಗ್ಗುತ್ತದೆ.  ಮಳೆ ಬರುವಾಗ ಬಾಗಿಲು ಹಾಕಿದರೆ ಆಯಿತು ಎಂದರೆ,  ಮಳೆಯ ಗಾಳಿಯ ಹೊಡೆತ ಇದೆಲ್ಲವನ್ನೂ ಮೀರಿಸುತ್ತದೆ ಎನ್ನುತ್ತಾರೆ ಇಲ್ಲಿನ ಪೋಷಕರು.

ಬಂಟ್ವಾಳ ತಾಲೂಕಿನ ಇತರ ಕೆಲವು ಅಂಗನವಾಡಿ ಕೇಂದ್ರಗಳಂತೆ ಇಲ್ಲಿರುವ ಕಟ್ಟಡಕ್ಕೂ ವಯಸ್ಸಾಗಿದೆ. ಹೆಂಚಿನ ಮಾಡಿನ ಈ ಕಟ್ಟಡ ಸಣ್ಣದಾಗಿಯೂ ಇದೆ. ಗೋಡೆಗಳೂ ಗಟ್ಟಿ ಇಲ್ಲ. ಕಿಟಕಿ, ಬಾಗಿಲುಗಳೂ ದುರಸ್ತಿಗೆ ಕಾದಿದೆ. ಮಳೆ ಬಂದರೆ ರಕ್ಷಣೆಗಾಗಿ ಇಳಿಛಾವಣಿಯೂ ಇಲ್ಲಿಲ್ಲ.

ಕೋಮಾಲಿ ಕೇಂದ್ರದ ಸಮಸ್ಯೆ ಏನು?

ಕೋಮಾಲಿ ಕೇಂದ್ರದಲ್ಲಿ ಇರುವ ಅಂಗನವಾಡಿ ಕೇಂದ್ರ ರಸ್ತೆ ಬದಿಯೇ ಇರುವ ಕಾರಣ ಸುರಕ್ಷತೆಗೂ ಒತ್ತು ನೀಡಬೇಕಾಗುತ್ತದೆ. ಆವರಣ ಗೋಡೆ ನಿರ್ಮಾಣ, ಹೊಸದಾದ ಕಟ್ಟಡ ನಿರ್ಮಾಣವಾದರೆ ಸಮಸ್ಯೆ ಪರಿಹಾರವಾಗುತ್ತದೆ. ಸದ್ಯ ಮಳೆ ಬಂದಾಗ ನೀರು ಒಳಗೆ ನುಗ್ಗುವ ಕಾರಣ, ಗೋಣಿ ಹಾಕಿದ್ರೂ ಪ್ರಯೋಜನವಾಗುತ್ತಿಲ್ಲ. ಒದ್ದೆ ನೆಲದಲ್ಲಿ ಮಕ್ಕಳು ಮುದುಡಿ ಕುಳಿತುಕೊಳ್ಳುವ ಪರಿಸ್ಥಿತಿ. ಆಗಾಗ ಕೈಕೊಡುವ ಕರೆಂಟ್ ಇರುವ ಕಾರಣ ಪರ್ಯಾಯ ವ್ಯವಸ್ಥೆಗಳೂ ಆಗಬೇಕು. (ಮಾರ್ಗದ ಹತ್ತಿರವೇ ಇರುವ ಕಾರಣ ಇಲ್ಲಿ ಬಂದೋಬಸ್ತ್ ಆಗಬೇಕು. ಹೊಸದಾದ ಕಟ್ಟಡ ಮೂಲಸೌಕರ್ಯಗಳೊಂದಿಗೆ ಮಕ್ಕಳಸ್ನೇಹಿಯಾಗಿ ನಿರ್ಮಾಣವಾಗಬೇಕು. ಎನ್ನುತ್ತಾರೆ ಕೋಮಾಲಿ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ಅಧ್ಯಕ್ಷೆ ಬೇಬಿ.

ಪದೆಂಜಿಮಾರ್ ಕೇಂದ್ರದಲ್ಲೂ ಸಮಸ್ಯೆ

ಸಜೀಪಮೂಡ ಗ್ರಾಮದ ಇನ್ನೊಂದು ಭಾಗದಲ್ಲಿ ಪದೆಂಜಿಮಾರ್ ಎಂಬ ಪ್ರದೇಶವಿದೆ. ಇಲ್ಲಿರುವ ಅಂಗನವಾಡಿ ಕೇಂದ್ರದಲ್ಲೂ ಸಮಸ್ಯೆಗಳಿವೆ. ಇಲ್ಲಿ ಸುಮಾರು 30 ಮಕ್ಕಳು ಪ್ರತಿದಿನ ಆಗಮಿಸುತ್ತಾರೆ. ಒಳಭಾಗದಲ್ಲಿದ್ದರೂ ಇಲ್ಲಿ ಮಕ್ಕಳ ಕೊರತೆ ಇಲ್ಲ. ಆದರೆ ಕಟ್ಟಡ ಇಲ್ಲಿ ಗಟ್ಟಿಮುಟ್ಟಾಗಿಲ್ಲ. ಬಾಗಿಲು ತೆಗೆಯುವ ವೇಳೆ ಕೇರೆ ಹಾವುಗಳಂಥದ್ದನ್ನು ಹಲವು ಬಾರಿ ಕಂಡವರಿದ್ದಾರೆ. ಇಲ್ಲಿಗೆ ಆಗಮಿಸುವ ಮಕ್ಕಳಿಗೆ ಸರಿಯಾದ ರಕ್ಷಣೆ ನೀಡುವಂಥ ಕಟ್ಟಡ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಬೇಡಿಕೆ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಸಜೀಪಮೂಡ ಕೋಮಾಲಿ ಅಂಗನವಾಡಿ ಕೇಂದ್ರ ಹೊಸದಾಗಿಯೇ ನಿರ್ಮಾಣವಾಗಬೇಕು – ಪದೆಂಜಿಮಾರ್ ನಲ್ಲೂ ಸಮಸ್ಯೆಗಳು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*