ಬಂಟ್ಟಾಳ ಯುವವಾಹಿನಿ ಘಟಕದ ವತಿಯಿಂದ ನಡೆಯುತ್ತಿರುವ ವಾರಕ್ಕೊಂದು ಗುರುತತ್ವವಾಹಿನಿ ಕಾರ್ಯಕ್ರಮದ 26 ನೇ ಮಾಲಿಕೆ ಬಂಟ್ವಾಳ ಯುವವಾಹಿನಿ ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ ಮನೆಯಲ್ಲಿ ನಡೆಯಿತು.
ಬಂಟ್ಟಾಳ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ ಗುರು ಸಂದೇಶ ನೀಡಿ ಯಾವುದೇ ಸಮಾಜವು ಹಳೆಯ ಅನಗತ್ಯ ಜಾಡ್ಯಗಳನ್ನು ಬಿಟ್ಟು ಬಿಡಲು ಮತ್ತು ಹೊಸತನವನ್ನು ರೂಢಿಸಿಕೊಳ್ಳಲು ಶಿಕ್ಷಣವೇ ಏಕಮಾತ್ರ ಮಾಧ್ಯಮ ಎಂದು ನಾರಾಯಣಗುರುಗಳು ಪ್ರತಿಪಾದಿಸಿದರು ಎಂದು ತಿಳಿಸಿದರು.
ಈ ಸಂದರ್ಭ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ,ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ, ಉದಯ್ ಮೆನಾಡ್, ಮಧುಸೂದನ್ ಮಧ್ವ,ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಕೊಟ್ಯಾನ್ ಕುದನೆ,ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಗಣೇಶ್ ಪೂಂಜರೆಕೋಡಿ, ಪ್ರೇಮನಾಥ್ ಕೆ, ಶಿವಾನಂದ ಎಂ, ರಾಜೇಶ್ ಸುವರ್ಣ, ಅರುಣ್ ಕುಮಾರ್, ಸದಸ್ಯರಾದ, ಪ್ರಶಾಂತ್ ಏರಮಲೆ,ಹರೀಶ್ ಅಜೆಕಲಾ , ಅರ್ಜುನ್ ಅರಳ , ಅಶ್ವಿನ್ ಬೊಳ್ಳಾಯಿ, ವಿಘ್ನೇಶ್ ಬೊಳ್ಳಾಯಿ,ಶ್ರಜನಿ ನಗ್ರಿ,ನಿಕೇಶ್ ಕೊಟ್ಯಾನ್, ಯಶೋಧರ ಕಡಂಬಲ್ಕೆ,ಸಂಕೇತ್ ಅರಳ, ನಿಕಿತಾ ಬೊಳ್ಳಾಯಿ,ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು
YUVAVAHINI BANTWAL
ಗುರುತತ್ವವಾಹಿನಿ
Be the first to comment on "ಬ್ರಹ್ಮಶ್ರೀ ನಾರಾಯಣಗುರುಗಳಿಂದ ಶೈಕ್ಷಣಿಕ ಕ್ರಾಂತಿ: ರಾಜೇಶ್ ಸುವರ್ಣ"